ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ನೂತನ ಕಚೇರಿ ಹಿಂದವೀ ಕಾರ್ಯಾಲಯಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಆಗಮಿಸಿ ಆಶೀರ್ವದಿಸಿದರು.
ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಸ್ವಾಮೀಜಿಯವರಿಗೆ ಗುರುದಕ್ಷಿಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಸ್ವಾಮೀಜಿಯವರ ಪಾದಸ್ಪರ್ಶದಿಂದ ಹಿಂದವೀ ಕಾರ್ಯಾಲಯವು ಪಾವನವಾಯಿತು. ಸ್ವಾಮೀಜಿಯವರ ಆಶೀರ್ವಾದವೇ ಹಿಂದೂ ಸಮಾಜಕ್ಕೆ ಶ್ರೀರಕ್ಷೆ ಎಂದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಟ್ರಸ್ಟ್ ನ ಅಧ್ಯಕ್ಷ ಮಹೇಂದ್ರ ವರ್ಮ, ಪದಾಧಿಕಾರಿಗಳು ಉಪಸ್ಥಿತರಿದ್ದರು.
























