ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಿಎ ಅಂತಿಮ ಪರೀಕ್ಷೆಯಲ್ಲಿ ಆದಿತ್ಯ ಆರ್. ಬನ್ನೂರು ತೇರ್ಗಡೆ

ಪುತ್ತೂರು: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ಮೇ 2025ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಅದಿತ್ಯ ಆರ್. ಬನ್ನೂರು ಉತ್ತೀರ್ಣರಾಗಿದ್ದಾರೆ.

ಈವರು ಪುತ್ತೂರಿನ ಹಿರಿಯ ಬಿಜೆಪಿ ಕಾರ್ಯಕರ್ತ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ಪುತ್ತೂರಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥೆ ಸುಧಾ ಕುಮಾರಿ ಪಿ.ಕೆ ದಂಪತಿ ಪುತ್ರ.

ಅದಿತ್ಯ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದಲ್ಲಿ ಪೂರ್ಣಗೊಳಿಸಿದ್ದಾರೆ. ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪಿಯು ಕಾಲೇಜು, ಪುತ್ತೂರಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ವಿವೇಕಾನಂದ ಕಾಲೇಜು ಮತ್ತು ತ್ರಿಷಾ ವಿದ್ಯಾಸಂಸ್ಥೆ, ಮಂಗಳೂರಿನಲ್ಲಿ ಮಾಡಿದ್ದಾರೆ. ಅವರು ಮಂಗಳೂರಿನ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಎ. ಉಮಾನಾಥ್ ರಾವ್ ಅಂಡ್ ಕಂಪನಿಯಲ್ಲಿ ಸಿಎ ಆರ್ಟಿಕಲ್ ಶಿಪ್‌ ನ್ನು ಪೂರ್ಣಗೊಳಿಸಿದ್ದಾರೆ.





















































 
 
error: Content is protected !!
Scroll to Top