ಹಿಂದೂ ಮುಖಂಡನ ಮೊಬೈಲ್‌ನಲ್ಲಿ ರಾಜಕಾರಣಿಯ ವಿಡಿಯೋ ಪತ್ತೆ : ಕರಾವಳಿಯಲ್ಲಿ ಸಂಚಲನ

ಬಸ್‌ಗೆ ಕಲ್ಲು ತೂರಿದ ಪ್ರಕರಣದಲ್ಲಿ ಸೆರೆಯಾದ ಸಂದರ್ಭದಲ್ಲಿ ಬಯಲಾದ ಇನ್ನೊಂದು ರಹಸ್ಯ

ಮಂಗಳೂರು : ಅಪಘಾತವೆಸಗಿದ ಖಾಸಗಿ ಬಸ್​ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಸೆರೆಯಾಗಿದ್ದ ಹಿಂದೂ ಮುಖಂಡ ಸಮಿತ್‌ರಾಜ್ ಧರೆಗುಡ್ಡೆಯ ಮೊಬೈಲ್‌ನಲ್ಲಿ ಕೆಲವು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಇದರಲ್ಲಿ ಕರಾವಳಿಯ ಓರ್ವ ರಾಜಕಾರಣಿಯ ಔಿಡಿಯೋ ಇದೆ ಎಂಬ ವಿಚಾರ ಸಂಚಲನವುಂಟುಮಾಡಿದೆ.

ಮೊಬೈಲ್​ನಲ್ಲಿ ಕರಾವಳಿಯ ರಾಜಕಾರಣಿಯೊಬ್ಬರ ಅಶ್ಲೀಲ ವಿಡಿಯೋ ಪತ್ತೆ ಆಗಿರುವ ಬಗ್ಗೆ ಕರಾವಳಿಯಲ್ಲಿ ಭಾರಿ ಚರ್ಚೆ ಶುರುವಾಗಿದೆ. ಮೂಡುಬಿದಿರೆ ಪೊಲೀಸರ ತನಿಖೆ ವೇಳೆ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಹಸಂಯೋಜಕರೂ ಆಗಿರುವ ಸಮಿತ್‌ರಾಜ್ ಧರೆಗುಡ್ಡೆ ಮೊಬೈಲ್​​​ನಲ್ಲಿ ಐವತ್ತಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಇದರಲ್ಲಿ ಕರಾವಳಿ ರಾಜಕಾರಣಿಯೊಬ್ಬರ ವಿಡಿಯೋ ಕೂಡ ಇದೆ ಎನ್ನಲಾಗುತ್ತಿದೆ. ಈ ಕುರಿತಾಗಿ ಮೂಡಬಿದಿರೆ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ.





















































 
 

ಸುಮಾರು ಎಂಟು ತಿಂಗಳ ಹಿಂದೆ ಮಹಿಳೆಯೊಬ್ಬರು ಚಲಾಯಿತ್ತಿದ್ದ ಸ್ಕೂಟಿಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದಿದ್ದು, ಈ ಸಂದರ್ಭ ಬಸ್​ ಮಾಲೀಕರಿಂದ ಮಹಿಳೆಗೆ 5 ಲ.ರೂ. ಪರಿಹಾರ ಕೊಡಿಸುವಲ್ಲಿ ಸಮಿತ್‌ರಾಜ್‌ ಧರೆಗುಡ್ಡೆ ಪ್ರಮುಖ ಪಾತ್ರ ವಹಿಸಿದ್ದು. ಈ ಪ್ರಕರಣಕ್ಕೆ ಸಂಬಂಧಿಸಿ ಸಮಿತ್‌ರಾಜ್ ಧರೆಗುಡ್ಡೆಯನ್ನು ಮೂಡಬಿದಿರೆ ಪೊಲೀಸರು ಕೆಲದಿನಗಳ ಹಿಂದೆ ಕಾರ್ಕಳದಲ್ಲಿ ಬಂಧಿಸಿದ್ದರು. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಮೇಲಧಿಕಾರಿಗಳ ಅನುಮತಿ ಪಡೆದು ಮೊಬೈಲ್ ಡೇಟಾ ಎಕ್ಸ್‌ಟ್ರಾಕ್ಟ್​​ ವೇಳೆ ಸ್ವತಃ ಪೊಲೀಸರೇ ಬೆಚ್ಚಿ ಬಿದಿದ್ದಾರೆ. 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗ ತುಣುಕುಗಳು ಪತ್ತೆ ಆಗಿವೆ.

ವಿಡಿಯೋಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಸಂದೇಶ್​ರಿಂದ ದೂರು ನೀಡಲಾಗಿದ್ದು, ಮೂಡಬಿದಿರೆ ಠಾಣೆಯಲ್ಲಿ ಈ ಸಂಬಂಧ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ, ಬೇರೆಯವರಿಗೆ ಕಳುಹಿಸುವ ಅಥವಾ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಸಾಧ್ಯತೆ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ.

ಮೂಡುಬಿದಿರೆ ಪೊಲೀಸರು ವಿಡಿಯೋದ ಮೂಲ ಪತ್ತೆ ಹಚ್ಚಲು ಮುಂದಾಗಿದ್ದು, ಇತ್ತ ಈ ಬಗ್ಗೆ ವಿಚಾರಣೆ ನಡೆಸಲು ಸಮಿತ್ ರಾಜ್​ಗೆ ನೋಟೀಸ್ ನೀಡಲು ಸಿದ್ದತೆ ನಡೆಸಿದ್ದಾರೆ. ಬಸ್​ಗೆ ಕಲ್ಲು ತೂರಿದ ಕೇಸ್ ನಲ್ಲಿ ಸಮಿತ್ ರಾಜ್ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.

error: Content is protected !!
Scroll to Top