ದೂಮಡ್ಕ-ಚಾಕೋಟೆ-ಮದಕ ಪರಿಶಿಷ್ಟ ಪಂಗಡ ಕಾಲೋನಿಗೆ ರಸ್ತೆ ನಿರ್ಮಿಸಿ : ಪತ್ರಿಕಾಗೋಷ್ಠಿಯಲ್ಲಿ ಗಿರಿಧರ ನಾಯ್ಕ್ ಆಗ್ರಹ

ಪುತ್ತೂರು: ಸುಮಾರು 13 ಮನೆಯಿರುವ ಇರ್ದೆ ಗ್ರಾಮದ ದೂಮಡ್ಕ-ಚಾಕೋಟೆ-ಮದಕ ಪರಿಶಿಷ್ಟ ಪಂಗಡ ಕಾಲೊನಿಗೆ ರಸ್ತೆಯಿಲ್ಲದೆ ಕಾಲೋನಿ ಜನತೆ ಕಳೆದ ಹಲವಾರು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದು, ರಸ್ತೆ ನಿರ್ಮಾಣ ಮಾಡಿಕೊಡುವಂತೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಅಧ್ಯಕ್ಷ ಗಿರಿಧರ ನಾಯ್ಕ್‍ ಆಗ್ರಹಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾಲೋನಿಗೆ ರಸ್ತೆಯಿಲ್ಲದೆ ಸುಮಾರು 90 ವರ್ಷಗಳು ಕಳೆಯಿತು. ಅದೂ ಒಂದೂವರೆ ಕಿ.ಮೀ. ಉದ್ದದ ಕಾಲುದಾರಿ. ಅಲ್ಲಿನ ನಿವಾಸಿಗಳು ಕಾಲು ದಾರಿಯನ್ನೇ ಇಂದಿಗೂ ಬಳಕೆ ಮಾಡುತ್ತಿದ್ದಾರೆ. ಈ ಕುರಿತು ಸ್ಥಳೀಯ ಪಂಚಾಯತ್‍ ಅಧ್ಯಕ್ಷರಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದು, ಯಾವುದೇ ಫಲ ಲಭಿಸಿಲ್ಲ. ಅಲ್ಲದೆ ಪುತ್ತೂರಿನ ಶಾಸಕ ಗಮನಕ್ಕೆ ತಂದಾಗಿ, ನಾನು ಶಾಸಕನಾಗಿ ಗೆದ್ದು ಬಂದಲ್ಲಿ ಎರಡು ದಿನದಲ್ಲಿ ರಸ್ತೆ ನಿರ್ಮಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಶಾಸಕರಾಗಿ ಎರಡು ವರ್ಷ ಕಳೆಯಿತು ರಸ್ತೆ ನಿರ್ಮಾಣದ ಮಾತು ಬಿಡಿ ಸ್ಥಳಕ್ಕೂ ಭೇಟಿ ನೀಡಿಲ್ಲ ಎಂದು ತಿಳಿಸಿದ ಅವರು, ರಸ್ತೆ ನಿರ್ಮಾಣ ಮಾಡದಿದ್ದಲ್ಲಿ ಮುಂದಿನ 15 ದಿನದಲ್ಲಿ ನಾನೇ ರಸ್ತೆ ನಿರ್ಮಿಸಿಕೊಡುತ್ತೇನೆ ಎಂದು ತಿಳಿಸಿದರು.

ಅಗಲವಾಗಿದ್ದ ಈ ರಸ್ತೆಯನ್ನು ಸ್ಥಳೀಯರೊಬ್ಬರು ಗುಂಡಿ ತೋಡಿ ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡಬಾರದು ಎಂದು ಕಲ್ಲಿನ ಕಂಬಗಳನ್ನು ಹಾಕಿದ್ದಾರೆ. ಅಲ್ಲದೆ ಇನ್ನೋರ್ವರು ದಾರಿ ನಿರ್ಮಿಸಬಾರದು ಎಂದು ಗುಡಿಸಲು ನಿರ್ಮಿಸಿದ್ದಾರೆ ಎಂದು ಆರೋಪಿಸಿದರು .





















































 
 

ಕಾಲು ದಾರಿಯ ಪರಿಣಾಮ ಅನಾರೋಗ್ಯ ಉಂಟಾದಲ್ಲಿ ರೋಗಿಯನ್ನು ಹೊತ್ತುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಸುಶೀಲಾ ಎಂಬವರ ಮನೆಗೆ ಭಾರೀ ಗಾಳಿ ಮಳೆಗೆ ಹಾನಿ ಉಂಟಾಗಿದ್ದು, ಸರಿಪಡಿಸಲು ನಿಟ್ಟಿನಲ್ಲಿ ಹಂಚುಗಳನ್ನು ಹೊತ್ತುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಸಂಬಂಧ ಪಟ್ಟವರು ರಸ್ತೆ ನಿರ್ಮಾಣ ಮಾಡಿ ಎಂದು ಆಗ್ರಹಿಸಿದ ಅವರು, ಸ್ಪಂದನೆ ದೊರೆಯದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ರಾಜ್ಯ ಕಾರ್ಯದರ್ಶಿ ಪ್ರಮೋದ್‍, ಕಾಲೋನಿ ನಿವಾಸಿಗಳಾದ ಪ್ರಮೋದ್, ಚಂದ್ರಶೇಖರ, ರೇವತಿ, ಪ್ರತಿಮಾ ಉಪಸ್ಥಿತರಿದ್ದರು.

error: Content is protected !!
Scroll to Top