ಕನ್ನಡಕ್ಕೆ ಅವಮಾನ ಮಾಡದಂತೆ ನಟ ಕಮಲ್ ಹಾಸನ್‌ಗೆ ನಿರ್ಬಂಧ ಹೇರಿದ ಕೋರ್ಟ್

ಕಸಪಾ ಅಧ್ಯಕ್ಷರ ದೂರನ್ನಾಧರಿಸಿ ಆದೇಶ ನೀಡಿದ ನ್ಯಾಯಾಲಯ

ಬೆಂಗಳೂರು: ಬಹುಭಾಷಾ ನಟ ಕಮಲ್ ಹಾಸನ್‌ಗೆ ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡದಂತೆ ಬೆಂಗಳೂರಿನ ಸಿವಿಲ್ ಕೋರ್ಟ್ ನಿರ್ಬಂಧಿಸಿದೆ.
ಕನ್ನಡ ಭಾಷೆಗೆ ಅವಹೇಳನ ಮಾಡಿದ ಕಮಲ್ ಹಾಸನ್ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅದರ ಅಧ್ಯಕ್ಷ ಮಹೇಶ್ ಜೋಶಿ ಮೊಕದ್ದಮೆ ದಾಖಲು ಮಾಡಿದ್ದರು.
ಈ ಮೆಕದ್ದಮೆಗೆ ‌ಸಂಬಂಧಿಸಿದ ಹಾಗೆ ತೀರ್ಪು ನೀಡಿರುವ ಕೋರ್ಟ್, ಪ್ರತಿವಾದಿ, ಅವರ ಏಜೆಂಟ್‌ಗಳು ಅಥವಾ ಅವರ ಮೂಲಕ ಕೆಲಸ ಮಾಡುವ ಯಾರೊಬ್ಬರೂ ಕನ್ನಡ ಭಾಷೆಯ ಬಗ್ಗೆ ಯಾವುದೇ ಟೀಕೆಗಳನ್ನು ಮಾಡಬಾರದು, ಪೋಸ್ಟ್‌ಗಳನ್ನು ಮಾಡಬಾರದು ಎಂದು ಸೂಚಿಸಿದೆ. ಈ ಸಂಬಂಧ ಬರೆಯುವುದು, ಪ್ರಕಟಿಸುವುದು, ವಿತರಣೆ ಮಾಡುವುದು ಇತ್ಯಾದಿಗಳನ್ನು ಮಾಡಬಾರದು ಎಂದು ನಿರ್ದೇಶಿಸಿದೆ.
ಜೊತೆಗೆ ಕನ್ನಡ ಭಾಷೆ, ಸಾಹಿತ್ಯ, ಭೂಮಿ, ಸಂಸ್ಕೃತಿಯನ್ನು ಅವಮಾನಿಸುವ ಹೇಳಿಕೆಗಳನ್ನು ನೀಡದಂತೆಯೂ ಉಲ್ಲೇಖಿಸಲಾಗಿದೆ. ಹಾಗೆಯೇ ವಾದಿಯು ಜೀರಿಗೆ ಸಂಬಂಧಿಸಿದ ದಾಖಲೆಗಳನ್ನು ವಾರ ದೊಳಗೆ ನೀಡದಿದ್ದಲ್ಲಿ, ಈ ನಿರ್ಬಂಧ ರದ್ದಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.





















































error: Content is protected !!
Scroll to Top