ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕ್‌ ಗೆ ಚೀನಾ ಜೊತೆ ಟರ್ಕಿಯೂ ನೆರವಾಗಿತ್ತು : ಭಾರತೀಯ ಸೇನೆ

ನವದೆಹಲಿ: ಚೀನಾ ತನ್ನ ರಕ್ಷಣಾ ಉತ್ಪನ್ನಗಳ ಜೀವಂತ ಪ್ರಯೋಗಶಾಲೆಯನ್ನಾಗಿ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ. ಪಾಕ್ ಬಳಸುವ 81% ಗಳಷ್ಟು ಮಿಲಿಟರಿ ಹಾರ್ಡ್‌ವೇರ್‌ಗಳು ಚೀನಾ ಮೂಲದ್ದಾಗಿವೆ ಎಂದು ಭಾರತೀಯ ಸೇನೆ ಹೇಳಿದೆ.

ಭಾರತದ ಸೇನೆಯ ಡೆಪ್ಯುಟಿ ಚೀಫ್ ಲೆ. ಜ. ರಾಹುಲ್ ಆರ್. ಸಿಂಗ್ ಅವರು, ಭಾರತ ಮತ್ತು ಪಾಕ್ ನಡುವೆ ಕಳೆದ ಮೇ ತಿಂಗಳಿನಲ್ಲಿ ನಡೆದ ಸಂಘರ್ಷದಲ್ಲಿ ಟರ್ಕಿ ಕೂಡಾ ಪಾಕ್‌ಗೆ ನೆರವು ನೀಡಿತ್ತು. ಇದು ಗಡಿಯಲ್ಲಿ ಭಾರತ ಮೂವರು ಶತ್ರುಗಳನ್ನು ಎದುರಿಸುವಂತಹ ‌ಸ್ಥಿತಿ ನಿರ್ಮಾಣ ಮಾಡಿತ್ತು ಎಂದು ತಿಳಿಸಿದ್ದಾರೆ.

ಕಳೆದ ಸಂಘರ್ಷದಲ್ಲಿ ಚೀನಾ ಮತ್ತು ಟರ್ಕಿಯ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಭಾರತದ ವಿರುದ್ಧ ಬಳಕೆ ಮಾಡಿತ್ತು. ಟರ್ಕಿಯ ಡ್ರೋನ್‌ಗಳನ್ನು ಪಾಕ್ ಬಳಸಿತ್ತು. ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಮತ್ತು ಸಾಮರ್ಥ್ಯ ಅಗಾಧ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದವರು ವಿವರಿಸಿದ್ದಾರೆ.





















































 
 
error: Content is protected !!
Scroll to Top