ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಬೇಕು, ಮೊಬೈಲ್ ಬಳಕೆ ನಿಷೇಧಿಸಬೇಕು: ಯುದುವೀರ್

ಧಾರ್ಮಿಕ ಕ್ಷೇತ್ರಗಳಿಗೆ ಧಾರ್ಮಿಕ ಭಾವನೆಯಿಂದಲೇ ಭೇಟಿ ನೀಡಬೇಕು

ಮೈಸೂರು: ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೂ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಸಂಬಂಧ ಮಾಧ್ಯಮಗಳ‌ ಜೊತೆಗೆ ಮಾತನಾಡಿದ ಅವರು, ಜನರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅವರ ಮನಸ್ಸು ಸಹ ಧಾರ್ಮಿಕ ಭಾವನೆಯಿಂದಲೇ ಇರುವಂತಾಗಬೇಕು ಎಂದು ಅವರು ಹೇಳಿದ್ದಾರೆ.





















































 
 

ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿರ್ಬಂಧಿಸಬೇಕು. ಈ ಕ್ರಮ ತಿರುಪತಿಯಲ್ಲಿ ಈಗಾಗಲೇ ಇದೆ. ಇದನ್ನು ಚಾಮುಂಡಿ ಬೆಟ್ಟದಲ್ಲೂ ಅಳವಡಿಸಬೇಕು. ಪ್ರಸ್ತುತ ದಿನಗಳಲ್ಲಿ ಕೆಲವು ಮಂದಿ ತಿಳಿದು, ತಿಳಿಯದೆಯೋ‌ ಚಾಮುಂಡಿ ತಾಯಿಯ ಮೂಲ ವಿಗ್ರಹದ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಮಾಡುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದ ಪಾವಿತ್ರ್ಯತೆ ನಾಶವಾಗುತ್ತದೆ ಎಂದು ಅವರು ನುಡಿದಿದ್ದಾರೆ.

error: Content is protected !!
Scroll to Top