ಸರ್ಕಾರದ ಯೋಜನೆಗಳ ಪ್ರಯೋಜನ ಬಡವರು, ದೀನರನ್ನು ತಲುಪುತ್ತದೆ: ಪ್ರಧಾನಿ ಮೋದಿ

ಶೀಘ್ರದಲ್ಲೇ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆ!

ಭಾರತದ ಪ್ರಗತಿಗೆ ಯುವಜನರು ಶಕ್ತಿ ತುಂಬುತ್ತಿದ್ದಾರೆ

ನವದೆಹಲಿ: ಪ್ರಧಾನಿ ಮೋದಿ ಅವರು ಆಫ್ರಿಕನ್ ದೇಶಗಳ ಪ್ರವಾಸದಲ್ಲಿದ್ದು, ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.





















































 
 

ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತವು ಇದೆ. ಶೀಘ್ರದಲ್ಲೇ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗುವ ಸಿದ್ಧತೆಯಲ್ಲಿ ನಾವಿದ್ದೇವೆ. ಹಾಗೆಯೇ ಭಾರತದ ಅಭಿವೃದ್ಧಿಯ ಫಲಗಳು ತೀರಾ ಅಗತ್ಯವಿರುವವರನ್ನು ತಲುಪುತ್ತಿವೆ. ಭಾರತ‌ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳು ದೇಶದ ಬಡವರು, ದೀನರನ್ನು ತಲುಪುತ್ತಿದ್ದು, ಅವರು ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು.

ಭಾರತದ ಪ್ರಗತಿಗೆ ಯುವಜನರು ಗಣನೀಯ ಕೊಡುಗೆಗಳ ಮೂಲಕ ಶಕ್ತಿ ತುಂಬುತ್ತಿದ್ದಾರೆ. ಭಾರತ ಕಳೆದ ದಶಕದಲ್ಲಿ ಸುಮಾರು 250 ದಶಲಕ್ಷಕ್ಕೂ ಅಧಿಕ ಜನರನ್ನು ಕಡು ಬಡತನದ ಸ್ಥಿತಿಯಿಂದ ಮೇಲಕ್ಕೆತ್ತಿದ್ದು, ಇದನ್ನು ವಿಶ್ವಬ್ಯಾಂಕ್ ಸಹ ಗಮನಿಸಿರುವುದಾಗಿ ಅವರು ತಿಳಿಸಿದರು.

ಭಾರತ ಯುಪಿಐ‌ಗೆ‌ ಸಂಬಂಧಿಸಿದ ಹಾಗೆ ಹೊಸ ಕ್ರಾಂತಿಯನ್ನೇ ಮಾಡಿದೆ. ಜಗತ್ತಿನ ಸುಮಾರು 50 ಪ್ರತಿಶತ ಡಿಜಿಟಲ್ ವ್ಯವಹಾರಗಳು ಭಾರತದಲ್ಲಿ ನಡೆಯುತ್ತಿವೆ. ಸ್ಟಾರ್ಟ್‌ಅಪ್‌ಗೆ ಸಂಬಂಧಿಸಿದ ಹಾಗೆಯೂ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

error: Content is protected !!
Scroll to Top