ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆ | ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಉಸಿರುಗಟ್ಟಿ ನಿಧನ

ಪುತ್ತೂರು: ಎಸಿ ಉಪಕರಣದಲ್ಲಿ ಕಾಣಿಸಿಕೊಂಡ ಹೊಗೆಯಿಂದಾಗಿ ಉಸಿರುಗಟ್ಟಿ ಆಸ್ಪತ್ರೆಗೆ ದಾಖಲಾದ ನಿವೃತ್ತ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಕೂರ್ನಡ್ಕ ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ನಡೆದಿದೆ.  

ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ (80) ಮೃತಪಟ್ಟವರು.

ಸಂಜಯನಗರ ಶ್ರೀಲಕ್ಷ್ಮೀ ಪ್ರಸನ್ನ ಲೇ ಔಟ್ ನಲ್ಲಿ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರ ಮನೆಯಲ್ಲಿ ಜು.4 ರಂದು ಕೊಠಡಿಯಲ್ಲಿನ ಹವಾನಿಯಂತ್ರಣ ಉಪಕರಣದಲ್ಲಿ ದೋಷ ಕಂಡು ಹೊಗೆ ಕಾಣಿಸಿಕೊಂಡಿತ್ತು. ಘಟನೆಗೆ ಸಂಬಂಧಿಸಿ ಮನೆಯ ಕಪಾಟು, ಮಂಚ ಹಾನಿಯಾಗಿದೆ. ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ತೆರಳಿದ್ದಾರೆ. ಈ ನಡುವೆ ಮನೆಯಲ್ಲಿ ಅನಾರೋಗ್ಯದಲ್ಲಿದ್ದ ವಯೋವೃದ್ಧ ನಿವೃತ್ತ ಶಿಕ್ಷಕ ಮುತ್ತು ಶೆಟ್ಟಿ ಅವರಿಗೆ ಮನೆಯಲ್ಲಿ ಆವರಿಸಿದ ಹೊಗೆಯಿಂದಾಗಿ ಉಸಿರಾಟದ ತೊಂದರೆ ಆಗಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.





















































 
 

ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

error: Content is protected !!
Scroll to Top