ಅನುಮತಿ ಇಲ್ಲದೆ ಪ್ರತಿಭಟನೆ | ಎಸ್‍ ಡಿಪಿಐ ಮುಖಂಡರ ಸಹಿತ 30 ಮಂದಿ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಅನುಮತಿ ರಹಿತ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ 30 ಜನರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಧವಾರ ಸಂಜೆ ಪುತ್ತೂರು ಕಿಲ್ಲೆ ಮೈದಾನದ ಬಳಿ ಎಸ್‍ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ,ದ ವತಿಯಿಂದ ಅಧ್ಯಕ್ಷ ಅಶ್ರಫ್ ಬಾವು ಎಂಬವರು ಹಾಗೂ ಇತರ ಸುಮಾರು 30 ಜನರು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ, ಅಕ್ರಮ ಗುಂಪು ಸೇರಿ, ಧ್ವನಿವರ್ಧಕವನ್ನು ಬಳಸಿ, ಪ್ರತಿಭಟನೆ ನಡೆಸಿರುವುದು ಕಂಡುಬಂದಿರುತ್ತದೆ.

ಈ ಬಗ್ಗೆ ಅಶ್ರಫ್‍ ಬಾವು ಸಹಿತ 30 ಮಂದಿ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 53-2025 ಕಲಂ 189(ಸಿ),  ಬಿ.ಎನ್.ಎಸ್ ಮತ್ತು ಕಲಂ 109 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.





















































 
 
error: Content is protected !!
Scroll to Top