ನೆಲ್ಯಾಡಿಯ ಲಾರಿ ಚಾಲಕನ ಮೇಲೆ ತಂಡದಿಂದ ಹಲ್ಲೆ

ಕಾರಿನಲ್ಲಿ ಬಂದು ಅಡ್ಡಗಟ್ಟಿ ಥಳಿಸಿದ ಗುಂಪು

ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಲಾರಿ ಚಾಲಕರೊಬ್ಬರ ಮೇಲೆ ನಿನ್ನೆ ರಾತ್ರಿ ಸಕಲೇಶಪುರ ಬಳಿ ಕಾರಿನಲ್ಲಿ ಬಂದ ತಂಡವೊಂದು ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಪ್ಲೈವುಡ್ ಸಾಗಿಸುತ್ತಿದ್ದ ಲಾರಿಯನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ತಂಡ ಬಾಗಿ ಗ್ರಾಮದ ಬಾಳ್ಳುಪೇಟೆಯ ಪೆಟ್ರೋಲ್ ಪಂಪ್‌ ಬಳಿ ಅಡ್ಡಗಟ್ಟಿ ಚಾಲಕ ನೆಲ್ಯಾಡಿ ಗ್ರಾಮದ ಮುಹಮ್ಮದ್ ನಿಶಾನ್‌ ಎಂಬವರ ಮೇಲೆ ಹಲ್ಲೆ ಮಾಡಿದೆ ಎನ್ನಲಾಗಿದೆ.

ಲಾರಿಯನ್ನು ಅಡ್ಡಗಟ್ಟಿ, ಗಾಜಿಗೆ ಲಾಠಿಯಿಂದ ಹೊಡೆದು ನಂತರ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಭೀತಿಗೊಳಗಾದ ಚಾಲಕ ಲಾರಿಯನ್ನು ಬಾಳ್ಳುಪೇಟೆಯ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ಸಮೀಪದ ತೋಟಕ್ಕೆ ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಡಸ್ಟರ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.





















































 
 
error: Content is protected !!
Scroll to Top