ಬೆಂಗಳೂರು ವಿವಿ‌ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಸರು?

ಕಾಂಗ್ರೆಸ್ ಸರ್ಕಾರದ ಈ ಆಲೋಚನೆಗೆ ಜೆಡಿಎಸ್‌ ಹೇಳಿದ್ದೇನು?

ಕನ್ನಡಿಗರಿಗೆ ದ್ರೋಹ ಎಸಗುತ್ತಿದೆಯೇ ಕಾಂಗ್ರೆಸ್?

ಬೆಂಗಳೂರು: ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಹೆಸರನ್ನು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಇರಿಸಲು ಕಾಂಗ್ರೆಸ್ ಮುಂದಾಗಿದ್ದು, ಇದನ್ನು ಜೆಡಿಎಸ್ ಖಂಡಿಸಿದೆ.





















































 
 

ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್, ಕರುನಾಡ ಜನತೆಗೆ ಕಾಂಗ್ರೆಸ್ ಸರ್ಕಾರ ದೊಡ್ಡ ದ್ರೋಹ ಮಾಡುತ್ತಿರುವುದಾಗಿ ಟೀಕಿಸಿದೆ.

ಕಾಂಗ್ರೆಸ್ ಎಂಬ ಗುಲಾಮಿ ಪಕ್ಷದ ತುಘಲಕ್ ಆಡಳಿತ ರಾಜ್ಯದಲ್ಲಿ ನಡೆಯುತ್ತಿದೆ. ಜನರ ವಿರೋಧವನ್ನೂ ಗಣನೆಗೆ ತೆಗೆದುಕೊಳ್ಳದೆ ರಾಮನ ಹೆಸರಿದ್ದ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿತು. ನಾಡ ಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರು ಈಗ ವಿಶ್ವ ಬ್ರ್ಯಾಂಡ್ ಆಗಿದೆ. ಆದರೆ ಕಾಂಗ್ರೆಸ್ ಈಗ ಬೆಂಗಳೂರು ಕೇಂದ್ರ ವಿವಿ‌ಗೆ ಮನಮೋಹನ್ ಸಿಂಗ್ ಹೆಸರಿಡಲು ಮುಂದಾಗಿದೆ. ಇದರ ಅವಶ್ಯಕತೆ ಈಗ ಇತ್ತೇ? ಎಂದು ಪ್ರಶ್ನೆ ಮಾಡಿದೆ. ಕಾಂಗ್ರೆಸ್ ದರ್ಪ, ಅಹಂಕಾರದಲ್ಲಿ ಮೆರೆಯುತ್ತಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

error: Content is protected !!
Scroll to Top