ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್‌ ಹಿರಿಮೆಗೆ ಪಾತ್ರರಾದ ದೀಪಿಕಾ ಪಡುಕೋಣೆ

ನವದೆಹಲಿ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆಗೆ ಹಾಲಿವುಡ್ ಚೇಂಬರ್ಸ್ ಆಫ್ ಕಾಮರ್ಸ್ 2026 ನ ಮೋಷನ್ ಪಿಕ್ಚರ್ಸ್‌ ವಿಭಾಗದಲ್ಲಿ ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ಸ್ಟಾರ್ ನೀಡಿ ಗೌರವಿಸಲಾಗಿದೆ.

ದೀಪಿಕಾ ಪಡುಕೋಣೆ ಅವರು ಜಾಗತಿಕ ಮಟ್ಟದಲ್ಲಿ ಮನರಂಜನಾ ವಲಯಕ್ಕೆ ಕೊಡುಗೆಗಳನ್ನು ನೀಡುವ ಮೂಲಕ ಗಮನಾರ್ಹ ಉಪಸ್ಥಿತಿಯನ್ನು ಉಳಿಸಿಕೊಂಡಿದ್ದಾರೆ.

ಟಿಮೊಥಿ ಚಲವೆಟ್, ಎಮಿಲಿ ಬ್ಲಂಟ್, ರಾಚೆಲ್ ಮ್ಯಾಕ್ ಆ್ಯಡಮ್ಸ್, ರಾಮ್ ಮಲೆಕ್, ಸ್ಟಾನ್ಲಿ ಟುಸಿ, ಡೆಮಿ ಮೂರ್ ಮೊದಲಾದ ಪ್ರಸಿದ್ಧ ಕಲಾಕಾರರ ಜೊತೆಗೆ ಪಡುಕೋಣೆ ಈ ಹಿರಿಮೆಯನ್ನು ಹಂಚಿಕೊಂಡವರಾಗಿದ್ದಾರೆ.





















































 
 

ಈ ಘೋಷಣೆಯನ್ನು ನೇರ ಪ್ರಸಾರದ ಮೂಲಕ ಮಾಡಲಾಗಿದ್ದು, ಈ ವಿಶಿಷ್ಟ ಗೌರವವನ್ನು ಪಡೆದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

error: Content is protected !!
Scroll to Top