ಯುವಕನಿಂದ ಮದುವೆ ಭರವಸೆಯಲ್ಲಿ ದೈಹಿಕ ಸಂಪರ್ಕದಿಂದ ಮಗುವಿಗೆ ಜನ್ಮ | ಸಂತ್ರಸ್ತೆಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ವಿಶ್ವಕರ್ಮ ಒಕ್ಕೂಟದ ನೇತೃತ್ವದಲ್ಲಿ ತುರ್ತು ಸಭೆ

ಪುತ್ತೂರು: ಯುವಕನಿಂದ ಮದುವೆಯ ಭರವಸೆಯಲ್ಲಿ  ಗರ್ಭವತಿಯಾಗಿ  ವಂಚನೆಗೊಳಗಾದ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ಕುರಿತು ವಿಶ್ವಕರ್ಮ ಒಕ್ಕೂಟದ ನೇತೃತ್ವದಲ್ಲಿ ಸಮಾಜದ ತುರ್ತು ಸಭೆ ಬುಧವಾರ ಕರ್ಮಲ ವಿಶ್ವಕರ್ಮ ಸಮಾಜ ಸೇವಾ ಸಭಾಂಗಣದಲ್ಲಿ ನಡೆಯಿತು.

oplus_0

ಸಭೆಯಲ್ಲಿ ಸಮಾಜ ಬಾಂದವರ‌ ಅಭಿಪ್ರಾಯ ಪಡೆದು, ಮುಂದೆ ಸಂತ್ರಸ್ತೆಯನ್ನು ಭೇಟಿ ಮಾಡಿ ಅಲ್ಲಿಂದ ಮಹಿಳಾ ಪೊಲೀಸ್ ಠಾಣೆ ಹಾಗೂ ಎಸ್ಪಿಯವರಿಗೆ ಮನವಿ ನೀಡಿ ಒಂದೆರಡು ದಿನದಲ್ಲಿ ಯಾವುದೇ  ಬೆಳವಣಿಗೆ ಇಲ್ಲದಿದ್ದ ಪಕ್ಷದಲ್ಲಿ ಸಮಾಜ ಬಾಂಧವರಿಂದ ಉಗ್ರಪ್ರತಿಭಟನೆ ನಡೆಸುವುದಾಗಿ ನಿರ್ಣಯಿಸಲಾಯಿತು.

ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮಾತನಾಡಿ, ಇಂದು ನಮ್ಮ ಸಮಾಜ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಸಂತ್ರಸ್ತೆ ಮತ್ತು ತಾಯಿ ನಮ್ಮಲ್ಲಿ ಬಂದಿಲ್ಲ ಎಂಬ ವಿಷಯ ಬೇಡ. ಹಿಂದುಗಳು ಒಗ್ಗಟ್ಟು ಹಾಗೆ ಹೀಗೆ ಹೇಳುವಾಗ ನಮ್ಮ ಹಿಂದು ಮಗಳಿಗೆ ಅನ್ಯಾಯ ಆದಾಗ ಸುಮ್ಮನೆ ಕುಳಿತುಕೊಳ್ಳಲಾಗುವುದಿಲ್ಲ. ನಮ್ಮ‌ ಕಮ್ಯುನಿಟಿ ಆಗಲಿ ಇನ್ನೊಂದು ಕಮ್ಯುನಿಟಿ ಆಗಲಿ ಅದು ಸಣ್ಣ ವಿಷಯ ಅಲ್ಲ. ಯಾರೋ ಬಿಜೆಪಿ ಮುಖಂಡನ ಮಗ ನಮ್ಮ‌ಸಮಾಜದ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ್ದಾನೆ. ಈ ಕುರಿತು ನಾವು ಮೊದಲು ಆಕೆಯ ಮನೆಗೆ ಹೋಗಿ ಮತಾನಾಡಿ ಬಳಿಕ ಎಸ್ಪಿಗೆ ಮನವಿ ಕೊಡುವುದು. ಆ ಬಳಿಕ ಪೊಲೀಸರು ಕ್ರಮ ಸರಿಯಾಗಿ ಕೈಗೊಳ್ಳದಿದ್ದಲ್ಲಿ ನಾವು ಅನ್ಯಾಯ ಮಾಡಿದ ಯುವಕನ ಮನೆ ಮುಂದೆ ಮತ್ತು ಪೊಲೀಸ್ ಠಾಣೆ ಮುಂದೆ  ಉಗ್ರ ಪ್ರತಿಭಟನೆ ಮಾಡಲಿದ್ದೇವೆ ಎಂದರು.





















































 
 

ಶಾಸಕರೇ ಕುದ್ದು ನಿಂತು ಮದುವೆ ಮಾಡಿಸಲಿ:

ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಶಾಸಕರ ಮನವಿಯಂತೆ ಮದುವೆ ಮಾತುಕತೆ ಮತ್ತು ಮುಚ್ಚಳಿಕೆಯನ್ನು ಆರೋಪಿ ಕೊಟ್ಡಿದ್ದಾನೆ. ಆ ಬಳಿಕ ಹುಡುಗ ಮದುವೆ ಒಪ್ಪದೆ ಮೋಸ ಮಾಡಿದ್ದಾನೆ ಈಗ ನಮ್ಮ ಶಾಸಕರೇ ಕುದ್ದು ನಿಂತು ಅವರಿಗೆ ಮದುವೆ ಮಾಡಿ ಕೊಡಬೇಕು. ಯಾಕೆಂದರೆ ಅವರು ಈಗಾಗಲೇ ಅದಕ್ಕೆ ಎಂಟ್ರಿ ಆಗಿದ್ದಾರೆ. ನಾವು ಈಗ ಶಾಸಕರಲ್ಲಿ ಹೋಗಿ ಮನವಿ ಕೊಡಬೇಕಾಗಿದೆ. ಮಾಡಿಲ್ಲ ಎಂದರೆ ಮುಂದೆ ವಿಶ್ವಕರ್ಮದವರು ಸಂತ್ರಸ್ತೆಗೆ ನ್ಯಾಯ ಕೊಡುವ ತನಕ ಹೋರಾಟ ಮಾಡಬೇಕಾಗಿದೆ ಎಂದು ಮಧು ಆಚಾರ್ಯ ಹೇಳಿದರು.

ನಮಗೆ ಯಾರನ್ನು ಗೆಲ್ಲಿಸಲಾಗದಿದ್ದರೂ ಸೋಲಿಸಲಂತು ಕಂಡಿತಾ ಆಗುತ್ತದೆ:

ರಾಜಕೀಯ ಪಕ್ಷದಲ್ಲಿ ನಮ್ಮ ಸಮಾಜದವರಿಗೆ ಯಾವ ಸೀಟ್ ಕೊಡುವುದಿಲ್ಲ. ನಮಗೆ ದೊಡ್ಡ ಅನ್ಯಾಯ ಆಗಿದೆ. ಸಂತ್ರಸ್ತೆಯ ಕುರಿತು ನಮ್ಮವರಲ್ಲಿ ವಿಚಾರಿಸಿದರೆ  ಯಾರೋ ಎನೋ ಆಗಿದೆ ಎಂದು ಹೇಳಿದವರೂ ಇದ್ದಾರೆ. ಆರೋಪಿಯ ತಂದೆ ಬಿಜೆಪಿ ಮುಖಂಡರಾಗಿರಬಹುದು, ಜ್ಯೋತಿಷಿ ಆಗಿರಬಹುದು, ದೇವಸ್ಥಾನದಲ್ಲಿ ಇರಬಹುದು. ನಾವೆಲ್ಲ ಒಗ್ಗಟ್ಟಿನಲ್ಲಿರಬೇಕು. ನಮ್ಮಲ್ಲಿ ಅದು ಇದು ಇಲ್ಲ ಗ್ರೂಪ್ ಇಲ್ಲ. ನಾವೆಲ್ಲ ಒಂದು. ಗ್ರೂಪ್ ಹೇಳುವವರನ್ನು ಬದಿಗಿಡುವ ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ನಮಗೆ ಯಾರನ್ನು ಗೆಲ್ಲಿಸಲಾಗದಿದ್ದರೂ ಸೋಲಿಸಲಂತು ಕಂಡಿತಾ ಆಗುತ್ತದೆ ಎಂದು ಮಧು ಆಚಾರ್ಯ ಹೇಳಿದರು.

ಅವಿಭವಜಿತ ದ.ಕ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಪ್ರಧಾನಕಾರ್ಯದರ್ಶಿ ಮುರಳಿಧರ ಆಚಾರ್ಯ, ಉಪಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ , ಹರ್ಷವರ್ದನ್ ನಿಟ್ಟೆ, ಜಯರಾಮ ಆಚಾರ್ಯ ಸಾಲಿಗ್ರಾಮ, ಜಯರಾಮ ಆಚಾರ್ಯ ಕುಲಾಯಿ, ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಗೌರವಾಧ್ಯಕ್ಷ   ಭಾಸ್ಕರ್ ಆಚಾರ್ಯಕಾಣಿಯೂರು, ವಿಶ್ವಕರ್ಮ ಬೀರಮಲೆ ಅಧ್ಯಕ್ಷ ಗಂಗಾದರ ಆಚಾರ್ಯ , ಕೋಶಾಧಿಕಾರಿ ನಿರಂಜನ ಆಚಾರ್ಯ, ಪುತ್ತೂರು ವಿಶ್ವಕರ್ಮ ಸಮಾಜ ಸಭಾ  ಸುರೇಂದ್ರ ಆಚಾರ್ಯ , ಯುವಮಿಲನ ಅಧ್ಯಕ್ಷ ಹರೀಶ್ ಆಚಾರ್ಯ , ಅನೆಗುಂದಿ ಗುರುದೇವ ಪರಿಷತ್ ಪುತ್ತೂರು ಸಮಿತಿ ಅಧ್ಯಕ್ಷ ವಿ ಪುರುಷೋತ್ತಮ ಆಚಾರ್ಯ,  ಉಮೇಶ್ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ಇಂದಿರ ಪುರುಷೋತ್ತಮ ಆಚಾರ್ಯ, ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ  ಆಚಾರ್ಯ, ಪುರಸಭೆ ಮಾಜಿ ಸದಸ್ಯ ಉದಯ ಆಚಾರ್ಯ ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top