ವಾಷಿಂಗ್ಟನ್: ಪಾಕಿಸ್ತಾನದ ಹೆಸರನ್ನು ಉಲ್ಲೇಖ ಮಾಡದೆಯೇ ಭಯೋತ್ಪಾದನೆಗೆ ಸಂಬಂಧಿಸಿದ ಹಾಗೆ ಕಠಿಣ ಕ್ರಮಕ್ಕೆ ಕ್ವಾಡ್ ಸದಸ್ಯ ರಾಷ್ಟ್ರಗಳು ಆಗ್ರಹಿಸಿದ್ದು, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿವೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರು 26 ಮಂದಿ ಪ್ರವಾಸಿಗರ ಸಾವಿಗೆ ಕಾರಣರಾಗಿದ್ದಾರೆ. ಉಗ್ರರು ಮತ್ತು ಅವರಿಗೆ ಆರ್ಥಿಕ ಬೆಂಬಲ ನೀಡಿದವರಿಗೆ ಶಿಕ್ಷೆಯಾಗಬೇಕು. ಅಮಾಯಕರ ಸಾವಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ ಎಂದು ಕ್ವಾಡ್ ಸದಸ್ಯ ದೇಶಗಳು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿದೆ.
ಎಲ್ಲಾ ತರಹದ ಉಗ್ರವಾದ, ಹಿಂಸೆ, ಅಕ್ರಮ ಒಳನುಸುಳುವಿಕೆ ಮೊದಲಾದ ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ವಿರೋಧಿಸಿದ್ದು, ಪಹಲ್ಗಾಮ್ ದಾಳಿಗೆ ಕಾರಣರಾದವರಿಗೆ ಶೀಘ್ರವೇ ಅಂತಾರಾಷ್ಟ್ರೀಯ ಕಾನೂನಿನನ್ವಯ ಕ್ರಮ ಕೈಗೊಳ್ಳುವ ಹಾಗೆಯೂ ಒತ್ತಾಯಿಸಲಾಗಿದೆ.
























