ಕರಾವಳಿಯ ಅಂಗನವಾಡಿಗಳಲ್ಲಿ LKG, UKG ಆರಂಭಿಸಲು ಸಿದ್ಧತೆ

ಮಂಗಳೂರು: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಇಂಗ್ಲೀಷ್ ಶಿಕ್ಷಣ ನೀಡುವ ಸಲುವಾಗಿ ಮತ್ತು ಅಂಗನವಾಡಿ ಕೇಂದ್ರಗಳನ್ನು ಬಲಪಡಿಸುವ ಉದ್ದೇಶದೊಂದಿಗೆ ಕರಾವಳಿ ಭಾಗದಲ್ಲಿನ 110 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆ‌ಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ತಯಾರಿ ನಡೆದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯ 70 ಅಂಗನವಾಡಿಗಳು ಮತ್ತು ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದ‌ 40 ಅಂಗನವಾಡಿ ಕೇಂದ್ರಗಳಲ್ಲಿ ಕೆಜಿ ತರಗತಿಗಳನ್ನು ಆರಂಭ ಮಾಡುವ ನಿಟ್ಟಿನಲ್ಲಿ ಪೂರ್ವತಯಾರಿಗಳನ್ನು ಆರಂಭ ಮಾಡಿದೆ. ಈ ಬಗ್ಗೆ ಇಲಾಖೆ ಸದ್ಯ ಮೌಖಿಕ ನಿರ್ದೇಶನ ನೀಡಿದ್ದು, ಅ. 2 ರಿಂದ ಕೆಜಿ ತರಗತಿಗಳು ಅಂಗನವಾಡಿಗಳಲ್ಲಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ.

ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತೆರೆಯುವ‌ ಬಗ್ಗೆ ಪ್ರಸ್ತಾಪ ಇತ್ತು. ಆದರೆ ಇದರಿಂದ ಅಂಗನವಾಡಿಗಳು ಮುಚ್ಚಬೇಕಾಗುತ್ತದೆ ಎನ್ನುವ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟಿಸಿ, ಅಂಗನವಾಡಿಗಳಲ್ಲೇ ಕೆಜಿ ತರಗತಿಗಳನ್ನು ಆರಂಭಿಸುವಂತೆ ಆಗ್ರಹಿಸಿದ್ದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top