ಪುತ್ತೂರು: ನರೇಂದ್ರ ಪದವಿಪೂರ್ವ ಕಾಲೇಜಿನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190 ವತಿಯಿಂದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಎಂ ಸಿ ಆರ್ ಟಿ ನ ಚೇರ್ಮನ್ ಆಶ್ರಯ ಭಂಡಾರಿ, ಕೋಶಾಧಿಕಾರಿ, ಎಂ ಸಿ ಆರ್ ಟಿ ನ ಭಾವಿ ಚೇರ್ಮೆನ್ ದಶರಥ ಶೆಟ್ಟಿ, ಪುತ್ತೂರಿನ ಸ್ವರ್ಣೋದ್ಯಮಿ ಸುಧನ್ವ ಆಚಾರ್ಯ 1,50,000 ಚೆಕ್ ನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ, ಸಂಚಾಲಕ ಸಂತೋಷ್ ಬಿ. ಕೋಶಾಧಿಕಾರಿ ಸಂಪತ್ ಕುಮಾರ್, ಸದಸ್ಯ ಉಮೇಶ್ ನಾಯಕ್, ಪ್ರಾಂಶುಪಾಲ ಪ್ರಸಾದ್ ಶಾನ್ ಭಾಗ್ ಉಪಸ್ಥಿತರಿದ್ದರು.
























