ಶ್ರೀನಗರ: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಂದು ಚಾಲನೆ ನೀಡಿದ್ದಾರೆ.
ಅಮರನಾಥ ಯಾತ್ರೆ ನಾಳೆಯಿಂದ ಆರಂಭವಾಗುವ ಹಿನ್ನೆಲೆಯಲ್ಲಿ ಅವರು ಇಂದು ಜಮ್ಮು ಕಾಶ್ಮೀರದ ಭಗವತಿ ನಗರದಲ್ಲಿದ್ದ 5880 ಭಕ್ತರಿದ್ದ ಶಿಬಿರಕ್ಕೆ ಧ್ವಜ ಹಾರಿಸುವ ಮುಖೇನ ಚಾಲನೆ ನೀಡಿದ್ದಾರೆ.
ಯಾತ್ರೆಯು ಪಹಲ್ಗಾನ್ ಮತ್ತು ಬಾಲ್ಟಾಲ್ ಮೂಲಕ ನಡೆಯಲಿದ್ದು, 38 ದಿನಗಳ ಕಾಲ ಅಂದರೆ ಆಗಸ್ಟ್ 7 ರ ತನಕ ನಡೆಯಲಿದೆ. ಸುರಕ್ಷತಾ ದೃಷ್ಟಿಯಿಂದ ಯಾತ್ರಾ ಮಾರ್ಗಗಳ ಮೇಲೆ ಭದ್ರತಾ ಪಡೆಗಳು ಕಣ್ಗಾವಲು ಇರಿಸಿವೆ.
























