ಉಗ್ರವಾದವನ್ನು ಜಗತ್ತು ಒಗ್ಗಟ್ಟಿನಿಂದ ಎದುರಿಸಬೇಕು: ಎಸ್. ಜೈಶಂಕರ್

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಡೆದ ಪಹಲ್ಗಾನ್ ದಾಳಿಗೆ ಪ್ರತೀಕಾರವಾಗಿ ಭಾರತ ಉಗ್ರವಾದದ ‌ವಿರುದ್ಧ ಶೂನ್ಯ ಸಹಿಷ್ಣುತೆ ಸಾರಿದ್ದು, ಉಗ್ರರಿಗೆ ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ‌ವಿನಾಯಿತಿ ನೀಡಲಾಗದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ಭಯೇತ್ಪಾದನೆಯ ವಿರುದ್ಧ ಜಾಗತಿಕ ಸಮುದಾಯ ಒಗ್ಗೂಡಬೇಕು ಎಂದು ಅವರು ವಿಶ್ವಸಂಸ್ಥೆಯಲ್ಲಿ ಒತ್ತಾಯಿಸಿದ್ದಾರೆ. ‘ದಿ ಹ್ಯುಮನ್ ಕಾಸ್ಟ್ ಆಫ್ ಟೆರರಿಸಂ’ ಹೆಸರಿನಲ್ಲಿ ವಿಶ್ವದ ಹಲವೆಡೆ ನಡೆಯುತ್ತಿರುವ ಭಯೋತ್ಪಾದನಾ ದಾಳಿಯ ಬಗ್ಗೆ ವಿವರಣೆ ನೀಡಲಾಗಿದೆ. ಭಯೋತ್ಪಾದನೆಯನ್ನು ತಡೆಯಲು ಮಾಡಲಾಗುತ್ತಿರುವ ಪ್ರಯತ್ನಗಳನ್ನು ಸಹ ಇದರಲ್ಲಿ ಹೇಳಲಾಗಿದೆ.

ಭಯೋತ್ಪಾದನೆಯ ‌ವಿರುದ್ಧ ಭಾರತ‌ ಶೂನ್ಯ ಸಹಿಷ್ಣುತೆ ಸಾರಿದೆ. ಉಗ್ರರಿಗೆ ‌ಶಿಕ್ಷೆಯಿಂದ ವಿನಾಯಿತಿ ನೀಡಬಾರದು. ಪರಮಾಣು ಬಾಂಬ್ ದಾಳಿಗಳಿಗೆ ಹೆದರಬಾರದು. ಉಗ್ರವಾದವನ್ನು ಇಡೀ ಜಗತ್ತು ಒಗ್ಗಟ್ಟಿನಿಂದ ಎದುರಿಸಬೇಕು. ಭಯೋತ್ಪಾದನೆಯನ್ನು ನಾಶ ಮಾಡುವ ಮೌಲ್ಯಗಳನ್ನು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಗಮನ ಇರಬೇಕು ಎಂದು ಎಸ್. ಜೈಶಂಕರ್ ಹೇಳಿರುವುದಾಗಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top