ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಜೈನ ಧರ್ಮದ ಸ್ವಾಮೀಜಿ ಹಾಗೂ ಪ್ರಧಾನಮಂತ್ರಿಯನ್ನು ನಿಂದಿಸಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಜಾಲತಾಣ ಪೇಸ್ ಬುಕ್ ನಲ್ಲಿ ಕರುನಾಡಿನ ಮಿನುಗುವ ನಕ್ಷತ್ರ” ಎಂಬ ಪೇಜ್ ಹೊಂದಿರುವ ವ್ಯಕ್ತಿಯು ಪೇಸ್ ಬುಕ್ ನಲ್ಲಿ ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡುವ ವೇಳೆ ಜೈನ ಧರ್ಮದ ಸ್ವಾಮೀಜಿಗೆ ಹಾಗೂ ಭಾರತದ ಪ್ರಧಾನ ಮಂತ್ರಿಗಳ ಗೌರವಕ್ಕೆ ಹಾಗೂ ಸಾರ್ವಜನಿಕ ಶಾಂತಿ ನೆಮ್ಮದಿಗೆ ದಕ್ಕೆಯನ್ನುಂಟು ಮಾಡುವ ರೀತಿಯಲ್ಲಿ ಸಂದೇಶ ರವಾನಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಡ್ನರು ನಿವಾಸಿ ಜೀವಂಧರ್ ಜೈನ್ ದೂರು ನೀಡಿದ್ದಾರೆ.
ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ.
























