ಪುತ್ತೂರು: ಮಾರುಕಟ್ಟೆಯು ವಿವಿಧ ರೀತಿಯ ಉತ್ಪನ್ನಗಳು ಮತ್ತು ವ್ಯವಹಾರ ಕಲ್ಪನೆಗಳಿಂದ ತುಂಬಿರುವಾಗ, ಹೊಸತನವನ್ನು ಮಾಡಲು ಮತ್ತು ವಿಶಿಷ್ಟವಾದ ಮತ್ತು ಉತ್ತಮವಾದದ್ದನ್ನು ಮಾಡಲು ಯಾವಾಗಲೂ ಅವಕಾಶವಿರುತ್ತದೆ. ವ್ಯವಹಾರದ ಯಶಸ್ಸು ಯೋಜನೆ ಮತ್ತು ಕಠಿಣ ಪರಿಶ್ರಮವನ್ನು ಅವಲಂಬಿಸಿರುತ್ತದೆ. ಅದ್ಭುತವಾದ ವ್ಯವಹಾರ ಕಲ್ಪನೆಯನ್ನು ಹೊಂದಿರುವುದು ಒಂದು ವಿಷಯ, ಆದರೆ ವ್ಯವಹಾರದ ಯಶಸ್ಸು ಕಲ್ಪನೆಯ ಕಾರ್ಯಗತಗೊಳಿಸುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಎಂದು ಪುತ್ತೂರಿನ ಉದ್ಯಮಿ, ಮರಿಕೆ ಹೋಂ ಇಂಡಸ್ಟ್ರಿ ಇದರ ಮಾಲಕ ಸುಹಾಸ್ ಮರಿಕೆ ಹೇಳಿದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಉದ್ಯಮ ಕ್ಷೇತ್ರದ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸುವ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ್ಯಕ್ರಮ ವ್ಯವಹಾರ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವ್ಯವಹಾರದ ಯಶಸ್ಸಿಗಾಗಿ ಮುಖ್ಯವಾದ ಅದರ ಸ್ವರೂಪದ ಬಗ್ಗೆ ಮಾತನಾಡಿದರು.
ವ್ಯವಹಾರದ ಯಶಸ್ಸಿಗೆ ಉತ್ತಮ ಯೋಜನೆ ಅಥವಾ ಕಾರ್ಯತಂತ್ರವನ್ನು ರೂಪಿಸುವುದು ಅತ್ಯಗತ್ಯ. ವ್ಯವಹಾರದ ಗುರಿಗಳು ಮತ್ತು ಉದ್ದೇಶಗಳು ಮತ್ತು ಅವುಗಳನ್ನು ಸಾಧಿಸುವ ಮಾರ್ಗಗಳನ್ನು ವಿವರಿಸುವ ಸಮಗ್ರ ವ್ಯಾಪಾರ ಯೋಜನೆಯ ಬಗ್ಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಮತ್ತು ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶಷ್ಟಿಕಾ ಮತ್ತು ಶಾನ್ವಿ ಸ್ವಾಗತಿಸಿ ವಂದಿಸಿದರು.
























