ಪಹಲ್ಗಾಮ್ ದಾಳಿಯ ಉಲ್ಲೇಖವಿಲ್ಲದ ಕಾರಣ SCO ಜಂಟಿ ಘೋಷಣೆಗಳಿಗೆ ಭಾರತ ಸಹಿ ಹಾಕಿಲ್ಲ

ನವದೆಹಲಿ: ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ರಕ್ಷಣಾ ಸಚಿವರ ಸಭೆಯಲ್ಲಿ ಜಂಟಿ ಘೋಷಣೆಗೆ ಸಹಿ ಮಾಡಲು ಭಾರತ ನಿರಾಕರಿಸಿತ್ತು. ಈ ಬಗೆ ಕೆಲವು ವರದಿಗಳು ಇದರಲ್ಲಿ ಬಲೂಚಿಸ್ತಾನ್ ಬಿಕ್ಕಟ್ಟಿನ ಉಲ್ಲೇಖ ಇರುವುದಾಗಿ ಹೇಳಿದ್ದವು.

ಇದಕ್ಕೆ ಸ್ಪಷ್ಚನೆ ನೀಡಿರುವ ಮೂಲಗಳು, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸುವಾಗ ವಿಫಲವಾದ ಕಾರಣ ಭಾರತ ಇದಕ್ಕೆ ಸಹಿ ಹಾಕಿಲ್ಲ ಎಂದಿವೆ. ಇದರಲ್ಲಿ ಪಹಲ್ಗಾಮ್, ಬಲೂಚಿಸ್ತಾನ್ ಅಥವಾ ಉಗ್ರವಾದದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಇದು ಭಾರತವು ಸಹಿ ಹಾಕುವುದಕ್ಕೆ ಹಿಂದೆ ಸರಿಯುವ ಹಾಗೆ ಮಾಡಿತು ಎಂದಿವೆ.

ಈ ದಾಖಲೆಯಲ್ಲಿ ಭಾರತದ ಪಹಲ್ಗಾಮ್‌ನಲ್ಲಾದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದ ಕಾರಣ ಭಾರತ ತೃಪ್ತಿಯಾಗಿಲ್ಲ. ಆದ್ದರಿಂದ ಸಹಿ ಹಾಕಲು ನಿರಾಕರಿಸಲಾಗಿದೆ ಎಂದು ಹೇಳಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top