ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತುಗಳ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಪುತ್ತೂರು ನಗರಠಾಣೆ ಸಬ್ ಇನ್ ಸ್ಪೆಕ್ಟರ್ ಆಂಜನೇಯ ರೆಡ್ಡಿ ಕಾರ್ಯಾಗರ ಉದ್ಘಾಟಿಸಿ, ಮಕ್ಕಳು ಅತೀ ವೇಗವಾಗಿ ಮಾದಕವಸ್ತುಗಳಿಗೆ ಬಲಿಪಶುವಾಗುತ್ತಿದ್ದಾರೆ. ಆದ್ದರಿಂದ ಮಕ್ಕಳು ಆದಷ್ಟು ಮಾದಕ ವಸ್ತುಗಳಿಂದ ದೂರವಿರಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಸಾಮಾಜಿಕ ಜಾಲತಾಣಗಳಿಂದ ದೂರವಾಗಿರಬೇಕು. ಮಕ್ಕಳು ದುಷ್ಚಟಗಳಿಂದ ದೂರವಿರಲು ಏಕಾಗ್ರತೆ ಮತ್ತು ಒಳ್ಳೆಯ ವಿಷಯಗಳನ್ನು ಗ್ರಹಿಸಿ, ಪಾಠದ ಬಗ್ಗೆ ಹೆಚ್ಚು ಗಮನಹರಿಸಿಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಬೀಟ್ ಪೊಲೀಸ್ ಸ್ಕರಿಯ, ಎ.ಎಸ್.ಐ ಕೃಷ್ಣಪ್ಪ, ವಿರೂಪಾಕ್ಷ, ಮತ್ತು ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು. ಶಿಕ್ಷಕಿ ಅನುರಾಧಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿರಾದ ಮಾಲಿನಿ, ಶಾಂತಿ ಮತ್ತು ಜ್ಯೋತಿ ಎಸ್. ಸಹಕರಿಸಿದರು.
























