ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಯಾದ ಬಳಿಕ ಅಲ್ಲಿಗೆ ದೇಶ ವಿದೇಶಗಳಿಂದ ಯಾತ್ರಿಕರ ದಂಡು ಹರಿದು ಬಂದಿದೆ.
ಈವರೆಗೆ ಶ್ರೀರಾಮನ ದರ್ಶನಕ್ಕೆ ಸುಮಾರು 5.5 ಕೋಟಿಗೂ ಅಧಿಕ ಜನರು ಭೇಟಿ ನೀಡಿದ್ದಾಗಿ ಉತ್ತರ ಪ್ರದೇಶದ ಸರ್ಕಾರ ಮಾಹಿತಿ ನೀಡಿದೆ. ಸುಮಾರು 4.5 ಲಕ್ಷಕ್ಕೂ ಅಧಿಕ ಗಣ್ಯರು ಶ್ರೀರಾಮ ಮಂದಿರಕ್ಕೆ ಬಂದು ಹೋಗಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯಾವುದೇ ಭಕ್ತರಿಗೂ ಸಮಸ್ಯೆಯಾಗದ ನೆಲೆಯಲ್ಲಿ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿದ್ದು, ಅಲ್ಲಿನ ವ್ಯವಸ್ಥೆಗಳ ಬಗೆಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹೆಚ್ಚುತ್ತಿರುವ ಭಕ್ತರ ಜನಸಂದಣಿ ತಪ್ಪಿಸಲು ಮತ್ತು ಎಲ್ಲರಿಗೂ ದರ್ಶನ ದೊರೆಯಬೇಕು ಎನ್ನುವ ಕಾರಣಕ್ಕೆ ಅಧಿಕಾರಿಗಳು ಆನ್ಲೈನ್ ಪಾಸ್ ವ್ಯವಸ್ಥೆಯನ್ನು ಸಹ ಆರಂಭಿಸಿದ್ದಾರೆ.
























