ನವದೆಹಲಿ: ಪಾಕಿಸ್ತಾನವು ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ಹಾಗೆ ಭಾರತಕ್ಕೆ ಪದೇ ಪದೇ ಪತ್ರ ಬರೆಯುತ್ತಿದ್ದು, ಇದನ್ನು ಜಲ ಶಕ್ತಿ ಸಚಿವ ಸಿ. ಆರ್. ಪಾಟೀಲ್ ತಿರಸ್ಕರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಅದು ಕೇವಲ ಔಪಚಾರಿಕ ಪತ್ರವಾಗಿದ್ದು, ಆ ಪತ್ರದಿಂದ ಭಾರತ ಈಗಾಗಲೇ ತೆಗೆದುಕೊಂಡ ನಿಲುವು ಬದಲಾಗುವುದಿಲ್ಲ ಎಂದಿದ್ದಾರೆ.
ಪಾಕ್ ಎಷ್ಟೇ ಬಾರಿ ವಿನಂತಿ ಮಾಡಿದರೂ ಈ ವಿಚಾರದಲ್ಲಿ ಭಾರತದ ನಿಲುವನ್ನು ಮರುಪರಿಶೀಲಿಸುವ ಯಾವುದೇ ಆಲೋಚನೆ ಹೊಂದಿಲ್ಲ. ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ನೀರು ಎಲ್ಲಿಗೂ ಹೋಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
























