ಮಂಜೇಶ್ವರ ಸಮೀಪ ವರ್ಕಾಡಿಯಲ್ಲಿ ಅಮಾನವೀಯ ಕೃತ್ಯ
ಕಾಸರಗೋಡು: ಮಗನೇ ಹೆತ್ತ ತಾಯಿಯನ್ನು ಬೆಂಕಿ ಹಚ್ಚಿ ಜೀವಂತ ದಹಿಸಿ ಕೋಮದ ಅಮಾನವೀಯ ಘಟನೆ ಮಂಜೇಶ್ವರ ಸಮೀಪ ವರ್ಕಾಡಿ ಎಂಬಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ. ವರ್ಕಾಡಿ ನಲ್ಲಂಗಿಯ ದಿ.ಲೂಯಿಸ್ ಮೊಂತೆರೋ ಎಂಬವರ ಪತ್ನಿ ಹಿಲ್ಡಾ (60) ಕೊಲೆಗೀಡಾದವರು. ಪುತ್ರ ಮೆಲ್ವಿನ್ ಈ ಕೃತ್ಯ ಎಸಗಿದ್ದಾನೆ.
ಘಟನೆಯಲ್ಲಿ ನೆರೆಮನೆಯ ಲೋಲಿಟಾ (30) ಎಂಬವರು ಗಂಭೀರ ಸುಟ್ಟ ಗಾಯ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಲಗಿದ್ದ ಮಹಿಳೆಗೆ ಬೆಂಕಿ ಹಚ್ಚಿದ್ದು, ಬಳಿಕ ತಾಯಿಗೆ ಹುಷಾರಿಲ್ಲ ಎಂದು ನೆರೆಮನೆಯ ಲೋಲಿಟಾರವರನ್ನು ಮನೆಗೆ ಕರೆಸಿ ಬೆಂಕಿ ಹಚ್ಚಿದ್ದಾನೆ. ತಾಯಿ ಮತ್ತು ಮೆಲ್ವಿನ್ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಇನ್ನೋರ್ವ ಮಗ ಆಲ್ವಿನ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಮೃತದೇಹ ಮನೆ ಸಮೀಪದ ಪೊದೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
























