ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ : ವಿಟ್ಲ ಎಂಎಸ್‍ ಎ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಆಯ್ಕೆ

ಪುತ್ತೂರು: ವಿಟ್ಲ ಎಂಎಸ್‍ ಎ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಕುಮಾರಿ ಕೀರ್ತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.

ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜು.26 ರಿಂದ 30 ರ ತನಕ ನಡೆಯುವ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಬುಧವಾರ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.

ಕುಮಾರಿ ಕೀರ್ತಿ ವಿಟ್ಲ ಪಡ್ನೂರು ಗ್ರಾಮ ಕುಕ್ಕಿಲ ಮನೆ ವನಿತಾ ಹಾಗೂ ಲಕ್ಷ್ಮಣ ಗೌಡ ದಂಪತಿ ಪುತ್ರಿಯಾಗಿದ್ದಾರೆ. ಇವರ ಕ್ರೀಡಾ ಸಾಧನೆಯು ಯಶಸ್ವಿಯಾಗಿ ಪ್ರಜ್ವಲಿಸುವಂತೆ  ಶ್ರೀ ದೇವರು ಕರುಣಿಸಲಿ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top