ಪುತ್ತೂರು: ಉಡುಪಿ ಜಿಲ್ಲೆಯ ಕಟಪಾಡಿ ಶ್ರೀಮತ್ ಜಗದ್ಗುರು ಅನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ 21ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆ ಜು.10ರಿಂದ ಪಡಕುತ್ಯಾರು ಸರಸ್ವತೀ ಮಂದಿರದಲ್ಲಿ ಜರಗಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಮಂಗಳವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.
ಪುತ್ತೂರು ಸಂಘ ಸಂಸ್ಥೆಗಳಿಗೆ ಆಮಂತ್ರಣ ಪತ್ರ ವಿತರಣೆ ನೀಡುವ ಕುರಿತು ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ ಪುತ್ತೂರು ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಗುರುಗಳಿಗೆ ಪಾದುಕೆಯ ರಜತ ಹರಿವಾಣ ಸಮರ್ಪಣೆ ಮಾಡುವ ಕುರಿತು ನಿರ್ಣಯಿಸಲಾಯಿತು.
ಚಾತುರ್ಮಾಸ್ಯ ವೃತಾಚರಣೆಯ ಆಮಂತ್ರಣ ಪತ್ರಿಕೆಯನ್ನು ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು, ಹಾಗೂ ಕೊಡುವಳಿಕೆ ಮೊಕ್ಯೇಸರರುಗಳಿಗೆ ವಿತರಿಸಿದ ಬಳಿಕ ಇತರ ವಿಚಾರಗಳ ಕುರಿತು ಸದಸ್ಯರಿಂದ ಸಲಹೆ ಸೂಚನೆ ಪಡೆಯಲಾಯಿತು.
ಶ್ರೀ ಗುರುಗಳ ಪಾದುಕೆಯ ರಜತ (ಅಂದಾಜು 1.5 ಕೆ.ಜಿ) ಹರಿವಾಣವನ್ನು ನಿರ್ಮಿಸಿ ಶ್ರೀ ಗುರುಗಳಿಗೆ ಸಮರ್ಪಿಸುವುದೆಂದು ನಿರ್ಣಯಿಸಲಾಯಿತು. ಹಣ ಅಥವಾ ಬೆಳ್ಳಿಯ ರೂಪದಲ್ಲಿ ದೇಣಿಗೆ ನೀಡುವಂತೆ ಸಮಾಜ ಬಾಂಧವರಲ್ಲಿ ಆನೆಗುಂದಿ ಗುರುಸೇವಾ ಪರಿಷತ್ ನ ಮಹಾಮಂಡಲದ ಅಧ್ಯಕ್ಷ ವಿ. ಪುರುಷೋತ್ತಮ ಅಚಾರ್ಯ ವಿನಂತಿಸಿದರು. ದೇಣಿಗೆ ಸಮರ್ಪಣೆ ಮಾಡುವವರು ಗಣೇಶ್ ಜ್ಯುವೆಲ್ಲರ್ಸ್ ಕೋರ್ಟ್ ರಸ್ತೆ,, ಹಾರ್ದಿಕ್ ಡೈ ವರ್ಕ್ಸ್ ರಾಘವೇಂದ್ರ ಕಾಂಪ್ಲೆಕ್ ಇಲ್ಲಿಗೆ ಸಂಪರ್ಕಿಸುವಂತೆ ವಿನಂತಿಸಲಾಯಿತು. ವಿಶ್ವ ಬ್ರಾಹ್ಮಣ ಸೇವಾ ಸಂಘ ಅಧ್ಯಕ್ಷ ಶ್ರೀಧರ ಆಚಾರ್ಯ, ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ ಆಚರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಪುರುಷೋತ್ತಮ ಆಚಾರ್ಯದ. ಕ ಜಿಲ್ಲಾ ಹಿತರಕ್ಷಣಾ ಸಂಘದ ಅಧ್ಯಕ್ಷ ಸುರೇಂದ್ರ ಆಚಾರ್ಯ, ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು, ಗುರುಸೇವಾ ಪರಿಷತ್ ಉಪಾಧ್ಯಕ್ಷ ಮುರುಳಿಧರ ಆಚಾರ್ಯ ಗುಡ್ಡೆಮನೆ, ಕಾರ್ಯದರ್ಶಿ ನಿರಂಜನ್ ಆಚಾರ್ಯ ಮರೀಲು, ಕೋಶಾಧಿಕಾರಿ ಜಯಪ್ರಕಾಶ್ ಆಚಾರ್ಯ ಕುಡ್ಡಿಲ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಈಶ್ವರಮಂಗಲ, ಜಗದೀಶ ಆಚಾರ್ಯ , ಹೇಮಂತ್ ಆಚಾರ್ಯ ಬನ್ನೂರು, ಸುರೇಶ್ ಆಚಾರ್ಯ ಕಾಣಿಯೂರು, ಪ್ರಭಾಕರ ಆಚಾರ್ಯ, ಗೋಪಾಲ ಆಚಾರ್ಯ ಕಂಬಾರ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಪುರೋಹಿತ ಸಚಿನ್ ಪ್ರಾರ್ಥಿಸಿದರು.
























