ಚಿಕ್ಕಮಗಳೂರು: ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಶೃಂಗೇರಿ ಸಮೀಪದ ನೆಮ್ಮಾರ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿದು ಆತಂಕ ಸೃಷ್ಟಿಯಾಗಿದೆ.
ಶೃಂಗೇರಿ – ಕಾರ್ಕಳ ನಡುವಿನ ಸಂಚಾರ ರಸ್ತೆಯನ್ನು ಗುಡ್ಡ ಕುಸಿತದ ಆತಂಕದಿಂದ ಜಿಲ್ಲಾಡಳಿತ ಈಗಾಗಲೇ ಬಂದ್ ಮಾಡಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲೇ ಅಧಿಕಾರಿಗಳು, ಪೊಲೀಸರು, ಜೆ ಸಿ ಬಿ ವ್ಯವಸ್ಥೆ ಬೀಡು ಬಿಟ್ಟಿದ್ದು, ಅನಾಹುತಗಳಾದಲ್ಲಿ ಶೀಘ್ರ ಕಾರ್ಯಾಚರಣೆಗೆ ಸಜ್ಜಾಗಿವೆ.
ಹಾಗೆಯೇ ಗುಡ್ಡ ಕುಸಿತದ ಎಚ್ಚರಿಕೆಯಾಗಿ ರೋಡ್ ಜಾಮ್ ಮಾಡಿ ಮಣ್ಣು ತೆರವು ಕಾರ್ಯ ಸಹ ಮಾಡಲಾಗುತ್ತಿದೆ. ಕಳೆದ 6 ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿ ತೇವವಾಗಿದ್ದು, ಇದರಿಂದಾಗಿ ಪದೇ ಪದೇ ಗುಡ್ಡ ಕುಸಿತವಾಗುತ್ತಿದೆ ಎಂದು ಹೇಳಲಾಗುತ್ತಿದೆ.
























