ಲಕ್ನೋ: ಉತ್ತರ ಪ್ರದೇಶದ ಆಗ್ರಾ ದಲ್ಲಿನ ಫತೇಹಬಾದ್ ಮತ್ತು ಬಾದಶಾಹಿ ಭಾಗ್ ನಗರಗಳ ಹೆಸರನ್ನು ಕ್ರಮವಾಗಿ ಸಿಂಧೂರಪುರಂ ಮತ್ತು ಬ್ರಹ್ಮಪುರಂ ಎಂದು ಮರುನಾಮಕರಣ ಮಾಡಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದೆ.
ಸೋಮವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾವನೆ ಬಂದಿದ್ದು, ಇದನ್ನು ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ. ಇದರ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲು ಸಿದ್ಧತೆಗಳು ನಡೆದಿವೆ.
ಈಗಿರುವ ಹೆಸರುಗಳು ಗುಲಾಮಗಿರಿಯನ್ನು ಸೂಚಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಸರು ಬದಲಾವಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
























