ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ: ದ.ಕ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದರ್ಶನ್ ಅವರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ  ಜಿಲ್ಲಾಧಿಕಾರಿ ಕಛೇರಿಯಲ್ಲಿ ಮಂಗಳವಾರ ಭೇಟಿಯಾಗಿ ಆಭಿನಂದಿಸಿದರು.

ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾಕ್ಷೇತ್ರದ ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ  ಮತ್ತು 94c, ಪ್ಲಾಟಿಂಗ್, ಬಡವರಿಗೆ ಮನೆ ಕಟ್ಟಲು  ತೊಂದರೆಯಾಗುತ್ತಿರುವ ಕೆಂಪುಕಲ್ಲು,ಮರಳು ವಿಚಾರಗಳನ್ನು ಡಿ.ಸಿ.ಯವರ ಗಮನಕ್ಕೆ ತರಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಮುಳಿಯ ಕೇಶವ ಭಟ್, ಭಾಜಪಾ ಜಿಲ್ಲಾ  ಉಪಾಧ್ಯಕ್ಷ ರಾಕೇಶ ರೈ ಕೆಡೆಂಜಿ, ಕಾಣಿಯೂರು ಸೊಸೈಟಿ ಅಧ್ಯಕ್ಷ ಗಣೇಶ ಉದನಡ್ಕ, ಮಾಜಿ ಗ್ರಾಮ ಪಂಚಾಯತ್ ಸದಸ್ಯ  ರಾಕೇಶ ಮೆಟ್ಟಿನಡ್ಕ, ರಾಮಚಂದ್ರ ಎಣಿತಡ್ಕ, ಉಪಸ್ಥಿತರಿದ್ದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top