ಶಿವನ ದೃಷ್ಟಿ ಸಂಚಾರಕ್ಕೆ ಅಡಚಣೆ | ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಕಟ್ಟಡ ತೆರವುಗೊಳಿಸುವುದೇ ಪರಿಹಾರ | ಪ್ರಶ್ನಾ ಚಿಂತನೆಯಲ್ಲಿ ದೈವಜ್ಞ ನಿಟ್ಟೆ ಪ್ರಸನ್ನ ಆಚಾರ್ಯ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಕಟ್ಟಡ ಶಿವನ ದೃಷ್ಟಿ ಸಂಚಾರಕ್ಕೆ ಅಡಚಣೆಯಾಗಿದ್ದು, ಈ ಕಟ್ಟಡಕ್ಕೆ ಯಾವುದೇ ಪರಿಹಾರವಿಲ್ಲ. ಇದನ್ನು ತೆರವುಗೊಳಿಸುವುದೇ ಪರಿಹಾರ ಎಂದು ದೈವಜ್ಞ ನಿಟ್ಟೆ ಪ್ರಸನ್ನ ಆಚಾರ್ಯ ಹೇಳಿದರು.

ಮಂಗಳವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಅವರು ಈ ಕುರಿತು ತಿಳಿಸಿದರು.

ಇದರ ಜೊತೆಗೆ ವಾಸುಕಿ ನಾಗ ಸನ್ನಿಧಿ ಮೂಲ ನಾಗಸನ್ನಿಧಿಗೆ ಸೇರುವುದು, ನವಗ್ರಹ ಗುಡಿ ದೇವಳದ ಒಳಾಂಗಣಕ್ಕೆ ಮತ್ತು ಅಯ್ಯಪ್ಪ ಸನ್ನಿಧಿಯನ್ನು ಆರಂಭದ ಕಾಲದಲ್ಲಿ ಸಂಕಲ್ಪ ಮಾಡಿದ ಸ್ಥಳಕ್ಕೆ ಸ್ಥಳಾಂತರ ಮಾಡುವುದೇ ಪರಿಹಾರ ಎಂದು ತಿಳಿಸಿದರು.





















































 
 

ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್‍ ರೈ, ದೇವಸ್ಥಾನದ ವ್ಯವಸಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ ವಿ, ಈಶ್ವರ ಬೆಡೇಕರ್, ವಿನಯ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top