ಚರ್ಚ್‌ ಒಳಗೆ ಆತ್ಮಹತ್ಯಾ ಬಾಂಬ್‌ ದಾಳಿ : 15 ಮಂದಿ ಸಾವು

ಚರ್ಚ್‌ನಲ್ಲಿ ಪ್ರಾರ್ಥನೆ ನಡೆಯುತ್ತಿರುವಾಗಲೇ ದಾಳಿ

ಡಮಾಸ್ಕಸ್:‌ ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿರುವ ಚರ್ಚ್‌ನಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಗೆ ಕನಿಷ್ಠ 15 ಜನರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಡಮಾಸ್ಕಸ್ ಬಳಿಯ ಡ್ವೀಲಿಯಾದಲ್ಲಿರುವ ಮಾರ್ ಎಲಿಯಾಸ್ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ದಾಳಿ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ.

ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ಸನಾ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ. ಯುಕೆ ಮೂಲದ ಸಿರಿಯನ್ ವೀಕ್ಷಣಾಲಯವು ಗಾಯಗೊಂಡವರು ಮತ್ತು ಸತ್ತವರ ಸಂಖ್ಯೆ ಸುಮಾರು 30 ಆಗಿರಬಹುದು ಎಂದು ಹೇಳಿಕೊಂಡಿದೆ. ಆದರೂ ಅದು ನಿಖರವಾದ ಅಂಕಿಅಂಶಗಳನ್ನು ನಿರ್ದಿಷ್ಟಪಡಿಸಿಲ್ಲ. ಕೆಲವು ಸ್ಥಳೀಯ ಮಾಧ್ಯಮಗಳು ಬಲಿಯಾದವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ವರದಿ ಮಾಡಿವೆ.





















































 
 

ಆತ್ಮಹತ್ಯಾ ಬಾಂಬರ್‌ ಮೊದಲು ಚರ್ಚ್‌ನೊಳಗೆ ನುಗ್ಗಿ ಗುಂಡು ಹಾರಿಸಿದ್ದು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ದಾಳಿಕೋರನೊಂದಿಗೆ ಇತರ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡಿದ್ದು ನಂತರ ಅವರು ಅಲ್ಲಿಂದ ಓಡಿ ಹೋಗಿದ್ದಾರೆ. ದಾಳಿಕೋರ ಐಸಿಸ್‌ ಊಗ್ರ ಸಂಘಟನೆಗೆ ಸೇರಿದವ ಎಂದು ಸಿರಿಯನ್ ಆಂತರಿಕ ಸಚಿವಾಲಯ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top