ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ದಶಮಾನೋತ್ಸವ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಕುಂಬ್ರ ಕಿರಣ್ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಶಾಖೆಯಲ್ಲಿ ನಡೆಯಿತು.
ದಶಮಾನೋತ್ಸವದ ಅಂಗವಾಗಿ ಬೆಳಿಗ್ಗೆ 7 ಗಂಟೆಗೆ ಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ಜರಗಿತು.

ದಾಖಲೆಯ ವ್ಯವಹಾರ, ಗುರಿ ಮುಟ್ಟಿದ ಸಾಧನೆ : ಚಿದಾನಂದ ಬೈಲಾಡಿ
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಸಮುದಾಯ ಹತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಮೋಹನ ಗೌಡ ಇಡ್ಯಡ್ಕ ಅವರ ನೇತೃತ್ವದಲ್ಲಿ 20 ಮಂದಿ ಸಮಾನ ಮನಸ್ಕರ ತಂಡದಿಂದ ಸಂಘ ಸ್ಥಾಪನೆ ಪ್ರಕ್ರಿಯೆ ಆರಂಭಗೊಂಡು ಸೆ.3, 2002ರಲ್ಲಿ ಪುತ್ತೂರಿನಲ್ಲಿ ಒಕ್ಕಲಿಗ ಸಮುದಾಯ ಹತ್ತಿನ ಸಹಕಾರ ಸಂಘ ಉದ್ಘಾಟನೆಗೊಂಡಿತು.ಜಗನ್ನಾಥ ಬೊಮ್ಮೆಟ್ಟಿ ಅವರು ಸ್ಥಾಪಕಾಧ್ಯಕ್ಷರಾಗಿ ನೇತೃತ್ವವಹಿಸಿಕೊಂಡಿದ್ದರು. ಆ ನಂತರ 2009ರಲ್ಲಿ ಕಡಬ ಶಾಖೆ, 2011ರಲ್ಲಿ ಉಪ್ಪಿನಂಗಡಿ, 2014ರಲ್ಲಿ ನೆಲ್ಯಾಡಿ, 2015ರಲ್ಲಿ ಕುಂಬ್ರ, 2020ರಲ್ಲಿ ಅಲಂಕಾರು: 2021 ರಲ್ಲಿ ಪುತ್ತೂರು, 2022ರಲ್ಲಿ ಕಾಣಿಯೂರು 2023ರಲ್ಲಿ ಬೆಳ್ಳಾರೆ ಹಾಗೂ 2024ರಲ್ಲಿ ವಿಟ್ಟ ಶಾಖೆ ಆರಂಭಗೊಂಡಿದೆ. 2020ರಿಂದ 2025 ವರ್ಷಕ್ಕೆ ಶಾಖೆ ಆರಂಭಗೊಂಡಿರುವುದು ಸಂಘದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು. ಸಂಘ 2024-25ನೇ ಸಾಲಿನಲ್ಲಿ ಸಂಘದ 10 ಶಾಖೆಗಳಲ್ಲೂ ದಾಖಲೆಯ ಮಟ್ಟದ ವ್ಯವಹಾರ ನಡೆವಿದ್ದು, ಸಂಘದಲ್ಲಿ ಒಟ್ಟು 744 ಕೋಟಿ ರೂ.ಗಳಿಗೂ ಮಿಕ್ಕಿದ ವ್ಯವಹಾರ ನಡೆದಿದ್ದು 99.18 ಶೇ. ಸಾಲ ವಸೂಲಾತಿಯಾಗಿದೆ. ಕುಂಬ್ರ ಶಾಖೆಯು ರೂ.65 ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿದ್ದು,ಶೇ. 99.03 ಸಾಲ ವಸೂಲಾತಿಯಾಗಿದೆ.ಕುಂಬ್ರ ಶಾಖೆಯು ಕೂಡ ಸಲಹಾ ಸಮಿತಿ ಹಾಗು ಸಿಬ್ಬಂದಿ ವರ್ಗ ಮತ್ತು ಗ್ರಾಹಕರ ಸಹಕಾರದಿಂದ ಅತ್ಯುತ್ತಮ ವ್ಯವಹಾರ ನಡೆಸಿ ಉನ್ನತ ಮಟ್ಟದ ಸಾಧನೆ ಮಾಡಿದೆ ಎಂದರು.

ಸಹಕಾರಿ ಕ್ಷೇತ್ರದಿಂದ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ : ಸಂಜೀವ ಮಠಂದೂರು
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊರಡುತ್ತಿದ್ದು ಆರ್ಥಿಕ ಪ್ರಗತಿಗೆ ಸಹಕಾರಿ ಕ್ಷೇತ್ರ ದೊಡ್ಡ ಕೊಡುಗೆಯನ್ನು ನೀಡಿದೆ. ರೈತಾಪಿ ವರ್ಗಕ್ಕೆ ಆರ್ಥಿಕ ಸಹಕಾರಕ್ಕಾಗಿ ಆರಂಭಗೊಂಡ ಸಹಕಾರಿ ಸಂಘಗಳು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿವೆ. ಗ್ರಾಹಕ ಬಂಧುಗಳಿಗೆ ಉತ್ತಮ ಸೇವೆ ನೀಡುತ್ತಾ ಹತ್ತು ವರ್ಷಗಳನ್ನು ಪೂರೈಸಿದ ಕುಂಬ್ರ ಶಾಖೆಯು ಶತಮಾನೋತ್ಸವ ಆಚರಿಸುವುದರ ಜೊತೆಗೆ ಸ್ವಂತ ಕಟ್ಟಡವನ್ನು ಹೊಂದುವಂತಾಗಲಿ ಎಂದು ಶುಭ ಹಾರೈಸಿದರು.
ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಿ ಮಾದರಿ ಸಹಕಾರಿ ಸಂಘವಾಗಿ ಮೂಡಿಬರಲಿ : ಮೋಹನ್ ಗೌಡ ಇಡ್ಯಡ್ಕ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಮೋಹನ್ ಗೌಡ ಇಡ್ಯಡ್ಕ ಮಾತನಾಡಿ, ಆರ್ಥಿಕ ಶಿಸ್ತು, ಸೇವಾ ತತ್ಪರತೆ, ಗ್ರಾಹಕರ ವಿಶ್ವಾಸವನ್ನು ಹೊಂದುವುದರ ಜೊತೆಗೆ ವ್ಯವಹಾರ ಕ್ಷೇತ್ರದಲ್ಲಿ ಹೊಸ ಮತ್ತು ಸಾಧಿಸುವ ಛಲವಿದ್ದರೆ ಯಾವುದೇ ಸಾಧನೆಯನ್ನು ಮಾಡಬಹುದು ಎಂಬುದನ್ನು ಸಂಘವು ಮಾಡಿ ತೋರಿಸಿದೆ. ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಿ ಮಾದರಿ ಸಹಕಾರಿ ಸಂಘವಾಗಿ ಮೂಡಿಬರಲಿ ಎಂದರು.
ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಸಹಕಾರಿ ಸಂಘ : ತ್ರಿವೇಣಿ ಪಲ್ಲತ್ತಾರು
ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಕುಂಬ್ರ ಶಾಖೆಯು ಇನ್ನಷ್ಟು ಅಭಿವೃದ್ಧಿ ಹೊಂದುವುದರ ಜೊತೆಗೆ ಸಂಘದ ಹೆಚ್ಚು ಹೆಚ್ಚು ಶಾಖೆಗಳು ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು.
ವ್ಯವಹಾರ ಧರ್ಮ ಸಂಘದ ಅಭಿವೃದ್ಧಿಗೆ ಪೂರಕವಾಗಿದೆ : ಸುಭಾಷ್ ರೈ ಕಡಮಜಲು
ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ಸುಭಾಷ್ ರೈ ಕಡಮಜಲು ಮಾತನಾಡಿ, ಕುಂಬ್ರ ಶಾಖೆಯ ಸಿಬ್ಬಂದಿ ದರ್ಗವವರ ನಗುಮೊಗದ ಸೇವೆ, ಗೌರವ, ವ್ಯವಹಾರ ಧರ್ಮ ಸಂಘದ ಅಭಿವೃದ್ಧಿಗೆ ಪೂರಕವಾಗಿದೆ. ಸಂಘವು ವ್ಯವಹಾರಿಕ ಸಾಧನೆಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.
ಎಲ್ಲಾ ಜಾತಿ-ಧರ್ಮಗಳ ಗ್ರಾಹಕರ ಆರ್ಥಿಕ ಪ್ರಗತಿಗೆ ಸಹಕರಿಸುವ ಸಂಘ : ಪಿ.ಕೆ.ಮಹಮ್ಮದ್
ಮುಖ್ಯ ಅತಿಥಿಯಾಗಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಷಿ.ಕೆ.ಮಹಮ್ಮದ್ ಮಾತನಾಡಿ, ಒಂದು ಜಾತಿ ಸಂಘಟನೆಯಿಂದ ಆರಂಭಗೊಂಡ ಸಹಕಾರಿ ಸಂಘವು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲಾ ಜಾತಿ ಧರ್ಮಗಳ ಗ್ರಾಹಕರ ಆರ್ಥಿಕ ಪ್ರಗತಿಗೆ ಸಹಕರಿಸುವ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿ.ಕೆ.ಜಯರಾಮ ರೈ ಮಾತನಾಡಿ, ಯಶಸ್ವಿ 10 ವರ್ಷಗಳನ್ನು ಪೂರೈಸಿ ದಶಮಾನೋತ್ಸವದ ಸಂಭ್ರಮದಲ್ಲಿರುವ ಒಕ್ಕಲಿನ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಮುನೃಡೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಪುರೋಹಿತ ಕೃಷ್ಣಕುಮಾರ್ ಉಪಾಧ್ಯಾಯ ಪಟ್ಟಮೂಲೆ ಮಾತನಾಡಿ, ಗ್ರಾಹಕರಿಗೆ ನಗುಮೊಗದ ಸೇವೆ ನೀಡಿ ಗ್ರಾಹಕ ಸ್ನೇಹಿಯಾಗಿರುವ ಕುಂಬ್ರ ಶಾಖೆಯು ಶತಮಾನೋತ್ಸವವನ್ನು ಪೂರೈಸಲಿ ಎಂದು ಶುಭಹಾರೈಸಿದರು.
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಮಾತನಾಡಿ, ಸಂಘದ ಅಭಿವೃದ್ಧಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಜಾತಿ ಸಂಘಟನೆಗಳು ಸಂಘಟನೆ, ಸಮಾಜದ ಸೌಹಾರ್ದತೆ ಗೋಸ್ಕರ ಹೊರತು ಸಂಘರ್ಷಕ್ಕಲ್ಲ ಎಂದು ಹೇಳಿದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಮತ್ತು ಕುಂಬ್ರ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಲೋಕೇಶ್ ಚಾಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಕುಂಬ್ರ ಶಾಖೆಯು ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿದ್ದು ಗ್ರಾಹಕ ಬಂಧುಗಳ ಸಹಕಾರ, ಸಿಬ್ಬಂದಿ ವರ್ಗದವರ ನಗುಮೊಗದ ಸೇವೆ ಮತ್ತು ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿಯ ಸಂಪೂರ್ಣ ಸಹಕಾರದಿಂದ ಅತ್ಯುತ್ತಮ ವ್ಯವಹಾರ ನಡೆಸುತ್ತಿದ್ದು, ಮುಂದೆಯೂ ಸಂಘದ ಪ್ರಗತಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ, ಪ್ರಸ್ತುತ ಸಲಹಾ ಸಮಿತಿ ಸದಸ್ಯ ಶಿವರಾಮ ಗೌಡ ಇದ್ದಪೆ ಮಾತನಾಡಿ, ಶಾಖೆಯ ಆರಂಭದಿಂದಲೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಸಲಹಾ ಸಮಿತಿಯ ಸಂಪೂರ್ಣ ಸಹಕಾರದಿಂದ ಇಂದು ಶಾಖೆಯು ಅತ್ಯುತ್ತಮ ಪಥದಲ್ಲಿ ಮುನ್ನಡೆಯುತ್ತಿದ್ದು ಎಲ್ಲರ ಸಹಕಾರಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಸಾಧಕರಿಗೆ ಸನ್ಮಾನ, ಗೌರವಾರ್ಪಣೆ:
ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀನಿವಾಸ ಗೌಡ ಕನ್ನಯ, ಸಾಮಾಜಿಕ ಕ್ಷೇತ್ರದ ಗಂಗಾಧರ ಗೌಡ ಕೆದರ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ರವಿರಾಮ ಭಟ್, ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೃಷಿ ಪದವಿ ಪಡೆದ ಕನ್ನಯ ಬೆಳಿಯಪ್ಪ ಗೌಡರ ಪ್ರತ್ರಿ ಹಿತಾಶ್ರೀ ಕೆ.ಬಿ, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ 2025ರ ಎಂ.ಡಿ. ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದ ಉಮಾಕಾಂತ್ ಬೈಲಾಡಿಯವರ ಪುತ್ರಿ ಧನ್ಯಶ್ರೀ ಬೈಲಾಡಿ, ಒಕ್ಕಲಿಗ ಸಮುದಾಯ ಹತ್ತಿನ ಸಹಕಾರಿ ಸಂಘದ ನಿರ್ದೇಶಕ, ಕುಂಬ್ರ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಲೋಕೇಶ್ ಚಾಕೋಟೆ, ನಿರ್ದೇಶಕ ಹಾಗೂ ಸಲಹಾ ಸಮಿತಿ ಉಪಾಧ್ಯಕ್ಷ ಸತೀಶ್ ಸಾಂಬಾರು, ಕುಂಬ್ರ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶಿವರಾಮ ಗೌಡ ಇದ್ಯಪೆ, ರೇಖಾ ಆರ್. ಗೌಡ ಅವರುಗಳನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಕಾರ್ಯಕ್ರಮ ನಿರ್ವಹಿಸಿದರು.
ಗೌರವಾರ್ಪಣೆ :
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಗೌಡ ಯು.ಪಿ.. ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಚಿನ್ನಪ್ಪಗೌಡ ಮಳುವೇಲು, ಮೋಹನ್ ಗೌಡ ಇಡ್ಯಡ್ಕ, ಸುದರ್ಶನ ಗೌಡ ಕೆ., ಸಂಜೀವ ಗೌಡ ಕೆ, ಪ್ರವೀಣ್ ಕುಂಟ್ಯಾನ, ಸುಪ್ರೀತಾ ರವಿಚಂದ್ರ, ತೇಜಸಿನಿ ಶೇಖರ ಗೌಡ ಮತ್ತು ಕುಂಬ್ರ ಸಲಹಾ ಸಮಿತಿ ಸದಸ್ಯರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ಶ್ರೀಧರ ಗೌಡ ಅಂಗಡಿಹಿತ್ತು, ವಿಶ್ವನಾಥ ಗೌಡ ಬೊಳ್ಳಾಡಿ, ಶ್ರೀಧರ ಗೌಡ ಎರಕ್ಕಳ, ಉಮೇಶ್ ಗೌಡ ಕನ್ನಯ, ರಾಮಣ್ಣ ಗೌಡ ಬಸವ ಹಿತ್ಲು, ವಿಜಯಭಾರತಿ, ಚಂದ್ರಶೇಖರ ಗೌಡ ಸಾರೆಪ್ಪಾಡಿ, ತಿರುಮಲೇಶ್ವರ ಗೌಡ ದೊಡ್ಡಮನೆ, ರಾಮಕೃಷ್ಣ ಗೌಡ ಸಾಮೆತ್ತಡ್ಕ, ಸುಬ್ರಾಯ ಗೌಡ ಪಾಲ್ತಾಡಿ, ಗ್ರಾಹಕರಾದ ವೆಂಕಪ್ಪ ಗೌಡ ಬೊಳ್ಳಾಡಿ, ರಾಮಣ್ಣ ಗೌಡ ಕೆಯ್ಯೂರು, ಅಮ್ಮು ರೈ, ಜಯಪ್ರಕಾಶ್ ಕೊಳ್ತಿಗೆ, ಲೀಲಾವತಿ ಬಿ.ಆರ್. ಮಾಧವ ನಾಯರ್, ಸಂಜೀವ ಗೌಡ ಪಾಲ್ತಾಡಿ, ರಾಮಕೃಷ್ಣ ಭಟ್, ಸದಾಶಿವ ಭಟ್, ಮೊಯಿದು ಕುಂಞಿ, ಮಹಮ್ಮದ್, ವಾರಿಜಾಕ್ಷಿ, ರಾಧಾ, ಸುರೇಶ್, ಪರಮೇಶ್ವರ ಗೌಡ ಕುಂಬ್ರ ಶಾಖಾ ಮೆನೇಜರ್ ಹರೀಶ್ ವೈ, ಸಿಬ್ಬಂದಿಗಳಾದ ಸಂಧ್ಯಾ, ದಿನೇಶ್ ಕುಮಾರ್ ಬಿ, ಪಿಗ್ಮಿ ಸಂಗ್ರಾಹಕರಾದ ಅನುರಾಜ್ ಪಿ, ಅಶ್ವಥ್ ಪಿ., ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತಸ್ವಿ ಬೊಳ್ಳಾಡಿ ಪ್ರಾರ್ಥಿಸಿದರು. ಲೋಕೇಶ್ ಚಾಕೋಟೆ ಸ್ವಾಗತಿಸಿದರು. ಸತೀಶ್ ಪಾಂಬಾರು ವಂದಿಸಿದರು. ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.
























