ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ನೇತೃತ್ವದಲ್ಲಿ ವ್ಯಾಪಕ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ | ಬೆಲೆ ಏರಿಕೆಯೊಂದೇ ಕಾಂಗ್ರೆಸ್‌ ಸರ್ಕಾರದ 2 ವರ್ಷದ ಸಾಧನೆ : ಕಿಶೋರ್‌ ಕುಮಾರ್‌ ಪುತ್ತೂರು

ಮಂಗಳೂರು: ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ದಕ್ಷಿಣ ಕನ್ನಡ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಬಿಜೆಪಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವತಿಯಿಂದ ಆಯೋಜಿಸಿದ ವಿವಿಧ ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಮತ್ತು ಪುರಸಭೆ ಕಚೇರಿಗಳ ಎದುರು ನಡೆದ  ಪ್ರತಿಭಟನೆಗಳಲ್ಲಿ ಭಾಗವಹಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನಿರ್ಧಾರಗಳು, ಬೆಲೆ ಏರಿಕೆ ಹಾಗೂ ನಿರ್ಲಕ್ಷ್ಯ ನೀತಿಯ ವಿರುದ್ಧ ಸ್ಥಳೀಯ ಬಿಜೆಪಿ ಘಟಕಗಳು ಸಂಘಟಿತ ಧರಣಿ ಮತ್ತು ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಹೋರಾಟದ ಅಂಗವಾಗಿ ಹಲವಾರು ಗ್ರಾಮ ಪಂಚಾಯತ್ ಗೆ ಕಿಶೋರ್ ಕುಮಾರ್ ಪುತ್ತೂರು ಅವರು ನೇರವಾಗಿ ಹಾಜರಾಗಿ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿದರು.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಹರೇಕಳ ಗ್ರಾಮ ಪಂಚಾಯತ್ ,  ಪಾವೂರು ಗ್ರಾಮ ಪಂಚಾಯತ್, , ಕೊಣಾಜೆ ಗ್ರಾಮ ಪಂಚಾಯತ್,  ಪಜೀರು ಗ್ರಾಮ ಪಂಚಾಯತ್ ,   ಸಜೀಪ ನಡು ಗ್ರಾಮ ಪಂಚಾಯತ್,  ಕುರ್ನಾಡು ಗ್ರಾಮ ಪಂಚಾಯತ್, ಬಾಳೆಪುಣಿ ಗ್ರಾಮ ಪಂಚಾಯತ್ ,  ಕೋಟೆಕಾರ್ ಪಟ್ಟಣ ಪಂಚಾಯತ್,  ಸೋಮೇಶ್ವರ ಪುರಸಭೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.





















































 
 

ಪ್ರತಿಭಟನೆಯನ್ನುದ್ದೇಶಿಸಿ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಈ ಸರ್ಕಾರದ ಆಡಳಿತ ಸಂಪೂರ್ಣ ಜನವಿರೋಧಿ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್, ರಸ್ತೆ, ನೀರು, ಆಹಾರ, ವಸತಿ, ಪಡಿತರ – ಪ್ರತಿಯೊಂದು ಕ್ಷೇತ್ರದಲ್ಲೂ ಸರ್ಕಾರದ ವಿಫಲತೆಯು ಸ್ಪಷ್ಟವಾಗಿದೆ. ಬೆಲೆ ಏರಿಕೆ ಮಾತ್ರ ಈ ಸರ್ಕಾರದ ಸಾಧನೆ. ಈ ಹೋರಾಟವು ಪ್ರಾರಂಭ ಮಾತ್ರ. ಮುಂದಿನ ದಿನಗಳಲ್ಲಿ ಈ ಧ್ವನಿ ಸದನದಲ್ಲೂ ಕೇಳಿಸಲಿದೆ. ಈ ಭಂಡ-ಭ್ರಷ್ಟ-ಮೂಡ ಸರ್ಕಾರವನ್ನು ಕಿತ್ತೆಸೆಯುವ ತನಕ ನಮ್ಮ ಹೋರಾಟ ನಡೆಯಲಿದೆ ಎಂದರು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ ಆಳ್ವ ಮತ್ತು ಯು.ಮೋ. ಅಧ್ಯಕ್ಷ ಮುರಲಿ ಕೊಣಾಜೆ ಹಾಗೂ ಪಂಚಾಯತ್ ಅಧ್ಯಕ್ಷರು, ಸದಸ್ಯರು ಸೇರಿದಂತೆ ಭಾರತೀಯ ಜನತಾ ಪಕ್ಷದ ಮುಖಂಡರು, ಶಕ್ತಿ ಕೇಂದ್ರ  ಮತ್ತು ಬೂತ್ ಮಟ್ಟದ ನಾಯಕರ ಉಪಸ್ಥಿತಿಯಲ್ಲಿ ಪ್ರತಿಭಟನೆಗಳು ಯಶಸ್ವಿಯಾಗಿ ನಡೆದವು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top