ಕಡಬ: ನೀಟ್ ಸೂಪರ್ ಸ್ಪೆಷಾಲಿಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಡಬದ ಯುವ ವೈದ್ಯರೋರ್ವರು ದೇಶದ ಪ್ರತಿಷ್ಠಿತ ಲಕ್ಕೋ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಸರ್ಕಾರಿ ಕೋಟಾದಡಿ ಸೀಟು ಗಿಟ್ಟಿಸಿಕೊಂಡಿದ್ದಾರೆ.
ಕಡಬ ತಾಲೂಕಿನ ಎಡಮಂಗಲ ಗ್ರಾಮದ ದೋಣಿಮನೆ ದುಷ್ಯಂತ ಗೌಡ ಮತ್ತು ಪ್ರೇಮ ದಂಪತಿ ಪುತ್ರ ಯುವ ವೈದ್ಯ ಡಾ. ಅವಿನ್ ದೋಣಿಮನೆ, ನೀಟ್ ಪರೀಕ್ಷೆ ಬರೆದು MCh ನ್ಯೂರೋ ಸರ್ಜರಿ (Brain & Spine Surgery) ವ್ಯಾಸಂಗಕ್ಕೆ ಉಚಿತ ಸೀಟ್ ಪಡೆದುಕೊಂಡಿದ್ದಾರೆ.
ತೀರಾ ಬಡ ಕುಟುಂಬದಿಂದ ಬಂದು ತನ್ನ ಪರಿಶ್ರಮದ ಮೂಲಕ ವೈದ್ಯರಾಗಿ ಗುರುಸಿಕೊಂಡಿರುವ ಡಾ. ಅವಿನ್ ದೋಣಿಮನೆ ಪ್ರಸ್ತುತ ದೆಹಲಿಯ ಮ್ಯಾಕ್ಸ್ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
























