ಐಶ್ವರ್ಯಾ ಗೌಡ ವಂಚನೆ ಕೇಸ್ : ಡಿ.ಕೆ. ಸುರೇಶ್ ED ವಿಚಾರಣೆಗೆ ಹಾಜರ್

ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರು ಬಳಸಿ ಐಶ್ವರ್ಯಾ ಗೌಡ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ED ವಿಚಾರಣೆಗೆ ಡಿ. ಕೆ. ಸುರೇಶ್ ಇಂದು ಹಾಜರಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಡಿ‌.ಕೆ. ಸುರೇಶ್‌ಗೆ ED ಅಧಿಕಾರಿಗಳು ಈ ಹಿಂದೆಯೇ ನೊಟೀಸ್ ಜಾರಿ ಮಾಡಿದ್ದರು. ಕಾಲಾವಕಾಶ ಕೇಳಿದ್ದ ಅವರು ಇಂದು ವಿಚಾರಣೆಗೆ ಹಾಜರಾಗಿರುವುದಾಗಿದೆ. ಶಾಂತಿನಗರದ ED ಕಚೇರಿಯಲ್ಲಿ ಈ ವಿಚಾರಣೆ ನಡೆದಿದೆ. ಈ ಸಂದರ್ಭದಲ್ಲಿ ಕಚೇರಿಯ ಪರಿಸರದಲ್ಲಿ ಭದ್ರತಾ ದೃಷ್ಟಿಯಿಂದ 100 ಪೋಲೀಸರನ್ನು ನಿಯೋಜನೆ ಮಾಡಲಾಗಿತ್ತು.

ವಿಚಾರಣೆಗೂ ಮುನ್ನ ಮಾತನಾಡಿದ ಅವರು ‘ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ತಾನು ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿಯೂ ಅವರು ಹೇಳಿದ್ದಾರೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top