ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ವಿವೇಕಾನಂದ ಔಷಧೀಯ ವಿಜ್ಞಾನ ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಕೇಶವ ಸಂಕಲ್ಪ ಆಡಿಟೋರಿಯಂನಲ್ಲಿ ಆಚರಿಸಲಾಯಿತು.
ಒಂದು ಆರೋಗ್ಯ, ಒಂದು ಭೂಮಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾಲೇಜು ಆಡಳಿತ್ತ ಮಂಡಳಿ ಸಂಚಾಲಕ ಗೋವಿಂದ ಪ್ರಕಾಶ್ ಸಾಯ ಹಾಗೂ ಪ್ರಾಂಶುಪಾಲ ಡಾ.ಗುರುರಾಜ ಎಮ್.ಪಿ. ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ನೆದರ್ ಲ್ಯಾಂಡ್ ನ ಭಾರತಿೇಯ ರಾಯಭಾರಿ, ಖ್ಯಾತ ಯೋಗಗುರು ಯೋಗಾಚಾರ್ಯ ವಿಜಯ ಗಣೇಶ್ ಮಾತನಾಡಿ, ಯೋಗ ಅಭ್ಯಾಸ ನಮ್ಮ ಉತ್ತಮ ಮನಸ್ಸು ಹಾಗೂ ದೇಹದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇಂದಿನ ಒತ್ತದ ಜಿೇವನ ಶೈಲಿಯಲ್ಲಿ ಉಸಿರಾಟದ, ಹಾರ್ಮೋನಲ್ ಅಸಮತೇಲ್ನವೂ ಸಂಭವಿಸಬಹುದು. ಉತ್ತಮ ವ್ಯಾಯಾಮ ನಮ್ಮ ಶರೀರಕ್ಕೆ ಮಾತ್ರ ಪ್ರಯೋಜನವಾಗುತ್ತದೆ. ಆದರೆ ಯೋಗಾಭ್ಯಾಸ ಆಂತರಿಕ ಅಂಗಾಗಗಳಿಗೂ ಲಾಭದಾಯವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಸೂರ್ಯನಮಸ್ಕಾರ ಹಾಗೂ ಇತರ ಆಸನಗಳ ಪ್ರಾತ್ಯಕ್ಷಿಕೆ ಜತೆಗೆ ವಿಭಿನ್ನ ಅಂಗಾಗಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಬೆಳಕು ಹರಿಸುತ್ತದೆ. ಮಿತವಾದ ಯೋಗಾಭ್ಯಾಸದಿಂದ ಹೃದಯಘಾತ ಹಾಗೂ ಅಕಾಲಿಕ ಮರಣದಿಂದ ತಪ್ಪಿಸಬಹುದು ಎಂದು ತಿಳಿಸಿದರು.
ಬಿಫಾರ್ಮ್ ವಿದ್ಯಾರ್ಥಿನಿ ಅನುಪ್ರಿಯಾ ಬಿ.ಎಲ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
























