ಆಪರೇಷನ್ ಸಿಂಧೂ : ಇರಾನಿನಿಂದ 11 ಜನ ಕನ್ನಡಿಗರು ಭಾರತಕ್ಕೆ ವಾಪಾಸು

ಬೆಂಗಳೂರು: ಯುದ್ಧ ಪೀಡಿತ ಇರಾನ್‌ನಿಂದ ಆಪರೇಷನ್ ಸಿಂಧೂ ಮೂಲಕ 11 ಮಂದಿ ಕನ್ನಡಿಗರನ್ನು ಮರಳಿ ಕರೆತರಲಾಗಿದೆ.

ಶನಿವಾರ ರಾತ್ರಿ ಟೆಹ್ರಾನ್‌ನಿಂದ 11 ಜನ ಕರ್ನಾಟಕದವರು ದೆಹಲಿಗೆ ಹಿಂದಿರುಗಿದ್ದಾರೆ. ಇಂದು ಅವರೆಲ್ಲರೂ ವಿಮಾನದ ಮೂಲಕ ಬೆಂಗಳೂರಿಗೆ ಬರಲಿದ್ದಾರೆ. ಜೂ.  19 ರಂದು ಇರಾನಿನಿಂದ ಅರ್ಮೇನಿಯಾ ಮೂಲಕ 110 ಮಂದಿ ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದರು.

ಯುದ್ಧದ ಸಂದರ್ಭದಲ್ಲಿ ಇಸ್ರೇಲಿನಲ್ಲಿಯೂ ಸಿಲುಕಿ ಹಾಕಿಕೊಂಡಿದ್ದ 18 ಮಂದಿ ಕರ್ನಾಟಕದ ವಿದ್ಯಾರ್ಥಿಗಳು ಜೂ. 19 ರಂದೇ ಭಾರತಕ್ಕೆ ಬರಬೇಕಾಗಿತ್ತು. ಆದರೆ ಅಲ್ಲಿ ತುರ್ತು ಪರಿಸ್ಥಿತಿಯ ಕಾರಣಕ್ಕೆ ಅವರು ಅಲ್ಲಿಯೇ ಉಳಿಯುವಂತಾಗಿತ್ತು. ಈಗಾಗಲೇ ಅವರೆಲ್ಲರೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top