ಅಮೆರಿಕ ದಾಳಿಯಿಂದ ವಿಕಿರಣ ಸೋರಿಕೆಯಾಗಿಲ್ಲ : ಇರಾನ್‌ ಸ್ಪಷ್ಟನೆ

ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಶಪಥ

ಟೆಹ್ರಾನ್‌: ಅಮೆರಿಕ ಮೂರು ಪರಮಾಣು ಕೇಂದ್ರಗಳ ಮೇಲೆ ನಡೆಸಿದ ದಾಳಿಯಲ್ಲಿ ಪರಮಾಣು ವಿಕಿರಣ ಸೋರಿಕೆಯಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ಮೂಲಕ ಪರಮಾಣು ಸ್ಥಾವರಗಳಿಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ.

ದಾಳಿ ವೇಳೆ ಪರಮಾಣು ವಿಕಿರಣ ಸೋರಿಕೆಯಾಗಿಲ್ಲ, ಮೂರು ಪರಮಾಣು ಕೇಂದ್ರಗಳನ್ನು ಮೊದಲೇ ಸ್ಥಳಾಂತರಿಸಲಾಗಿತ್ತು ಹಾಗಾಗಿ ಯಾವುದೇ ಪರಮಾಣು ಸೋರಿಕೆ ಸಂಭವಿಸಿಲ್ಲ ಎಂದು ಇರಾನ್ ಹೇಳಿದೆ. ಇಂತಹ ದಾಳಿಗಳು ವಿಶ್ವದ ಶಾಂತಿಗೆ ಅಪಾಯಕಾರಿ. ಅಮೆರಿಕ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಮಾಡಿದೆ. ಅಮೆರಿಕದ ದಾಳಿಯನ್ನು ನಾವು ಸಹಿಸುವುದಿಲ್ಲ. ನೀವು ದಾಳಿಯನ್ನು ಆರಂಭಿಸಿದ್ದೀರಿ ಆದರೆ ಇದನ್ನು ನಾವು ಅಂತ್ಯಗೊಳಿಸುತ್ತೇವೆ ಎಂದು ಸ್ಪಷ್ಟ ಎಚ್ಚರಿಕೆ ರವಾನಿಸಿದೆ.





















































 
 

ಇಸ್ರೇಲ್‌ ವಾಯುಪ್ರದೇಶ ಬಂದ್‌

ಈ ನಡುವೆ ಇರಾನಿನ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ನಂತರ ಮುನ್ನೆಚ್ಚರಿಕೆಯಾಗಿ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ ಎಂದು ಇಸ್ರೇಲ್ ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಕಟಿಸಿದೆ. ಇರಾನ್​ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಸೇನೆಯು ವೈಮಾನಿಕ ದಾಳಿ ನಡೆದಿದೆ. ಈ ಕುರಿತು ಖುದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮಾಹಿತಿ ನೀಡಿದ್ದು, ಇದೀಗ ಶಾಂತಿಯ ಸಮಯ ಎಂದಿದ್ದಾರೆ. ಒಂದೊಮ್ಮೆ ಈಗ ಶಾಂತಿ ಸ್ಥಾಪಿಸದಿದ್ದರೆ ಮತ್ತೊಮ್ಮೆ ದಾಳಿ ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಒಂದೊಮ್ಮೆ ಈಗ ಇರಾನ್ ಶಾಂತಿ ಕಾಪಾಡದೆ ಪ್ರತ್ಯುತ್ತರ ನೀಡಲು ಪ್ರಯತ್ನಿಸಿದರೆ ಸಂಪೂರ್ಣ ವಿನಾಶ ಮಾಡುವವರೆಗೂ ನಾವು ಬಿಡುವುದಿಲ್ಲ ಎಂದು ಇರಾನ್‌ ಎಚ್ಚರಿಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

ಇದೇ ವೇಳೆ ಅಮೆರಿಕ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಗೆ ನೆತನ್ಯಾಹು ಸಂತಸ ವ್ಯಕ್ತಪಡಿಸಿದ್ದಾರೆ. ಈ ದಾಳಿಯ ನಂತರ ಬೆಂಜಮಿನ್ ನೆತನ್ಯಾಹು ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದರು. ಅಮೆರಿಕ ನಿಜವಾಗಿಯೂ ವಿಶಿಷ್ಟವಾಗಿದೆ. ಭೂಮಿಯ ಮೇಲಿನ ಯಾವುದೇ ದೇಶ ಮಾಡಲು ಸಾಧ್ಯವಾಗದ ಕೆಲಸವನ್ನು ಅದು ಮಾಡಿದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top