ಪುತ್ತೂರು :ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ಜನರ ಆರೋಗ್ಯದ ದೃಷ್ಟಿಯಿಂದ ಜೂನ್ 21ರಂದು ಜಗತ್ತಿಗೆ ಮತ್ತೊಮ್ಮೆ ಯೋಗವನ್ನು ಪರಿಚಯಿದ್ದು, 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪುತ್ತೂರು ಗ್ರಾಮಂತರ ಹಾಗೂ ನಗರಮಂಡಲದ ಯುವ ಮೋರ್ಚಾ ವತಿಯಿಂದ ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶನಿವಾರ ಆಚರಿಸಲಾಯಿತು..

ಯೋಗ ಶಿಕ್ಷಕರಾಗಿ ತಾಲೂಕು ಶಿಕ್ಷಣ ಪ್ರಮುಖ, ಎಸ್ ಪಿ ವೈ ಎಸ್ ಎಸ್ ಸಮಿತಿಯ ತಾಲೂಕು ಶಿಕ್ಷಣ ಪ್ರಮುಖ ವಸಂತ ಸುವರ್ಣ, ಯೋಗದ ಕುರಿತು ಮಾಹಿತಿ ನೀಡಿ, ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಮಾಜಿ ಅಧ್ಯಕ್ಷ ಜೀವಂದರ್ ಜೈನ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿಬಿ., ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ, ಗ್ರಾಮಾಂತರ ಮಂಡಲದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲೀಮನೆ,
ಅನಿಲ್ ತೆಂಕಿಲ ಕಿಶೋರ್ ಕುಮಾರ್ ಕೊಳತ್ತಾಯ, ಶಿಶಿರ್ ಪೆರೋಡಿ ನಿತೀಶ್ ಕಲ್ಲೆಗ, ವಿದ್ಯಾಧರ್ ಜೈನ್, ವಿರೂಪಾಕ್ಷ ಭಟ್, ರಾಮ್ ನಾಯಕ್, ವೆಂಕಟರಮಣ ಗೌಡ, ನಾಗೇಶ್ ಟಿಎಸ್, ಗೌರಿ ಬನ್ನೂರು, ಸ್ವರ್ಣಲತಾ ಹೆಗ್ಡೆ, ದೀಕ್ಷಾ ಪೈ, ರತನ್ ರೈ, ಆಶಾ ಭಗವಾನ್, ಇಂದಿರಾ ಆಚಾರ್ಯ, ಜಯಶ್ರೀ ಶೆಟ್ಟಿ, ಮೋಹಿನಿ, ಜಯಲಕ್ಷ್ಮಿ ಶಗ್ರಿತ್ತಾಯ, ವಿಶ್ವನಾಥ ಬನ್ನೂರು, ಸೀನಪ್ಪ ಕುಲಾಲ್, ಸುಮತಿ, ಹೇಮಾವತಿ, ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಯುವರಾಜ ಪೆರಿಯತ್ತೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
























