ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನವ್ಯ, ಸದಸ್ಯರಾದ ಸುರೇಶ್ ಗಂಡಿ, ವಿನುತ ಅರ್ಚನಾ, ಚಂದ್ರಾವತಿ ಹರೀಶ್, ರಝಾಕ್, ಸಲೀಂ, ಫಾರೂಕ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕರಾದ ಹರಿಣಾಕ್ಷಿ ಎಂ., ಶೋಭಾ, ಶ್ರೀಲತಾ, ಕವಿತಾ, ಶಿಲ್ಪರಾಣಿ, ಸೌಮ್ಯ, ಸವಿತಾ, ಸಂಚನಾ, ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ ಮಳಿ, ಅಡುಗೆ ಸಿಬ್ಬಂದಿಗಳಾದ ಪಾರ್ವತಿ, ಪ್ರೇಮ, ಸುಶಿಲಾ ಉಪಸ್ಥಿತರಿದ್ದರು. ದೈ ಶಿಕ್ಷಣ ಶಿಕ್ಷಕಿ ಹೇಮಾವತಿ, ಯೋಗ ಶಿಕ್ಷಕ ಹಿಮತ್ ಕೆ ಕಾರ್ಯಕ್ರಮ ಸಂಯೋಜಿಸಿದರು.
























