ಪುತ್ತೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನೂ ಪ್ರಗತಿ ಪಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ಶನಿವಾರ ಆಚರಿಸಲಾಯಿತು.

ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ ಯು ಶ್ರೀಪತಿ ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗಾಭ್ಯಾಸ ಯೋಗ ದಿನವಾದ ಇಂದಿಗೆ ಮಾತ್ರ ಸೀಮಿತವಾಗದೆ ಎಲ್ಲ ದಿನಗಳಲ್ಲಿ ಅಭ್ಯಾಸ ಮಾಡುವಂತಾಗಬೇಕು. ಯೋಗ ಮನುಷ್ಯ ಅರೋಗ್ಯವನ್ನು ಕಾಪಿಡುವಲ್ಲಿ ಬಹಳ ಮುಖ್ಯವಾದದ್ದು. ದಿನನಿತ್ಯ ಯೋಗ ಆಚರಣೆಯಿಂದ ಈಗಿನ ಯುವ ಪೀಳಿಗೆಯನ್ನು ಕಾಡುತ್ತಿರುವ ಅತಿಯಾದ ದೇಹದ ತೂಕ, ಅತಿಯಾದ ರಕ್ತದೊತ್ತಡ ಸೇರಿದಂತೆ ಹಲವಾರು ಅರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದರು.
SPYSS ಪುತ್ತೂರು ತಾಲೂಕು ವರದಿ ಪ್ರಮುಖ ಲಕ್ಷ್ಮಿಕಾಂತ್ ಮಾತನಾಡಿ, ಯೋಗ ಧರ್ಮಾತೀತವಾದದ್ದು. ಯೋಗಭ್ಯಾಸ ಮಾಡುವುದರಿಂದ ಅರೋಗ್ಯ, ಆಯಸ್ಸನ್ನು ಹೆಚ್ಚುಗೊಳಿಸಬಹುದು. ಯಾವುದೇ ಸಂದರ್ಭವನ್ನು ಎದುರಿಸುವ ಮಾನಸಿಕ ಸಿದ್ಧತೆಗೆ ಯೋಗ ಅನುಕೂಲಕಾರಿ ಎಂದು ತಿಳಿಸಿದರು.
ಅತಿಥಿಯಾಗಿ SPYSS ಘಟಕದ ಯೋಗ ಶಿಕ್ಷಕ ಅಶೋಕ್ ಎಮ್. ಯೋಗ ಪ್ರಾತ್ಯಕ್ಷಕೆಯೊಂದಿಗೆ ಯೋಗ ತರಗತಿ ನಡೆಸಿಕೊಟ್ಟರು. ಸಂಸ್ಥೆಯ ಆಡಳಿತಧಿಕಾರಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. I DMLT ವಿದ್ಯಾರ್ಥಿಗಳಾದ ಕು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿ, ಕು.ರಕ್ಷಿತಾ ವಂದಿಸಿದರು. ಕು. ದೀಕ್ಷಾಯಿನಿ ಮತ್ತು ಕು ಅನ್ನತ್ ಬೀಬಿ ಪ್ರಾರ್ಥಿಸಿದರು
























