ಪುತ್ತೂರು: ಕುದ್ಮಾರು ಸ. ಹಿ. ಪ್ರಾ. ಶಾಲಾ ಮುಖ್ಯಗುರುಗಳಾಗಿದ್ದು ವಯೋನಿವೃತ್ತಿ ಹೊಂದಿದ ಬರೆಮೇಲು ಕುಶಾಲಪ್ಪರಿಗೆ ನ್ಯೂಸ್ ಪುತ್ತೂರು ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ನ್ಯೂಸ್ ಪುತ್ತೂರು ಇದರ ಅಧ್ಯಕ್ಷ ಸೀತಾರಾಮ ಕೇವಳ ಮತ್ತು ನಿರ್ದೇಶಕ ನಾಗೇಶ್ ಕೆಡೆಂಜಿಯವರು ಶಾಲು ಅರ್ಪಿಸಿ ಹೂ ಗುಚ್ಛ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕುಶಾಲಪ್ಪರ ಪತ್ನಿ, ಬೊಬ್ಬೇಕೇರಿ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಗೀತಾ ಕುಮಾರಿ ಡಿ. ವೇದಿಕೆಯಲ್ಲಿದ್ದರು. ರಾಕೇಶ್ ರೈ ಕೆಡೆಂಜಿಯವರು ಶಾಲು ಹೊದಿಸಿ ಸನ್ಮಾನಿಸಿದರು.
ಕುದ್ಮಾರು ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಊರ ಶಿಕ್ಷಣಾಭಿಮಾನಿಗಳು ಮತ್ತು ಶಾಲಾ ಅಭಿವೃದ್ಧಿ ಮಂಡಳಿ ಮತ್ತು ಮೇಲುಸ್ತುವಾರಿ ಸಮಿತಿಯವರು ಸಹಕರಿಸಿದರು.
























