ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಆಚರಿಸಲಾಯಿತು.
ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದ ಅಂತರಾಷ್ಟ್ರೀಯ ಯೋಗ ದಿನವನ್ನು ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಲಾಗಿದ್ದು, ಗೇರುಕಟ್ಟೆ ಕ್ಷೀರಸಂಗಮ ಸಭಾಭವನ ಕಳಿಯ ಶಾಖಾ ಯೋಗ ಶಿಕ್ಷಕಿ ಪ್ರೇಮಲತಾ, ಸಹಶಿಕ್ಷಕ ಸುಕೇಶ್, ಸಂಚಾಲಕ ಕೇಶವ ಪೂಜಾರಿ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಯೋಗ ಬಂಧುಗಳಾದ ಅರುಣ, ಶುಭಮಂಗಳ, ಹರೀಶ ಮಾವಿನಕಟ್ಟೆ, ಮೀರಾ, ಶಿವಣ್ಣ, ರತ್ನಾಕರ, ನಿತಿನ್, ಮಧುಕರ, ಧನಂಜಯ, ರಮೇಶ್, ವಿಜಯ, ದಿವಾಕರ ಆಚಾರ್ಯ ಗೇರುಕಟ್ಟೆ, ಭಾರತಿ, ಗಣೇಶ, ಅಶೋಕ ಆಚಾರ್ಯ, ಆದರ್ಶ, ಧರಿತ್ರಿ ಮುಂತಾದವರು ಪಾಲ್ಗೊಂಡಿದ್ದರು.
























