ಕುದ್ಮಾರು ಶಾಲೆಗೆ ಸುಸಜ್ಜಿತ ಧ್ವಜಸ್ತಂಭದ ಕೊಡುಗೆ

ಪುತ್ತೂರು: ಕಡಬ ತಾಲೂಕು ಕುದ್ಮಾರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿವೃತ್ತಿ ಪಡೆದ ಕುಶಾಲಪ್ಪ ಬರೆಮೇಲು ಅವರು ಶಾಲೆಗೆ ಸುಸಜ್ಜಿತ ಧ್ವಜಸ್ತಂಭವೊಂದನ್ನು ಕೊಡುಗೆಯಾಗಿ ನೀಡಿದರು.

ಸುಸಜ್ಜಿತ ಧ್ವಜಸ್ತಂಭ
ಸುಮಾರು 85,000/- ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಧ್ವಜಸ್ತಂಭವು ಮೂರು ಹಂತಗಳ ಮೆಟ್ಟಿಲುಗಳನ್ನು ಹೊಂದಿದ್ದು ರಾಷ್ಟ್ರ ಧ್ವಜದ ತ್ರಿವರ್ಣಗಳಿಂದ ಕಂಗೊಳಿಸುತ್ತಿದೆ. ಸುಮಾರು 50 ಚದರ ಅಡಿಗಳಷ್ಟು ವಿಶಾಲವಾಗಿರುವ ಪೀಠಕ್ಕೆ ನಾಲ್ಕು ಸುತ್ತುಗಳಿಂದಲೂ ಸ್ಟೈನ್’ಲೆಸ್ ಸ್ಟೀಲ್ ಕಂಬಿಗಳನ್ನು ಬಳಸಿ ನಿರ್ಮಿಸಿದ, ಗೇಟ್ ಸಹಿತವಾದ ತಡೆ ಬೇಲಿ ಇದೆ. ಇದರಿಂದಾಗಿ ನಾಯಿ ಇತ್ಯಾದಿ ಪ್ರಾಣಿಗಳು ಧ್ವಜಸ್ತಂಭ ಕಟ್ಟೆಯನ್ನು ಮಲಿನಗೊಳಿಸುವುದರಿಂದ ರಕ್ಷಣೆ ನೀಡಲಾಗಿದೆ.

ಗ್ರಾಮದ ಪ್ರಥಮ ಪ್ರಜೆಯಿಂದ ಲೋಕಾರ್ಪಣೆ
ಕುದ್ಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತೇಜಸ್ವಿ ಕೊಡಂಗೆ ಈ ಧ್ವಜಸ್ತಂಭವನ್ನು ಲೋಕಾರ್ಪಣೆಗೊಳಿಸಿದರು. ಕೊಡುಗೆ ನೀಡಿದ ಕುಶಾಲಪ್ಪ ಸರ್ ಮತ್ತು ಅವರ ಪತ್ನಿ ಶ್ರೀಮತಿ ಗೀತಾ ಕುಮಾರಿ ಡಿ. ಅವರು ಜೊತೆಯಾದರು





















































 
 

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ದೇವರಾಜ್ ನೂಜಿ, ಮಾಜಿ ಅಧ್ಯಕ್ಷೆ ಶ್ರೀಮತಿ ನವ್ಯಾ ಅನ್ಯಾಡಿ, ಸಿ.ಆರ್.ಪಿ. ಜಯಂತ ವೈ., ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ರೀಲತಾ ಮತ್ತು ಶಿಕ್ಷಕರು, ಗ್ರಾ. ಪಂ. ಸದಸ್ಯೆ ತಾರಾ ಅನ್ಯಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕಾರ್ಯದರ್ಶಿ ಮೇದಪ್ಪ ಕೂವೆತ್ತೋಡಿ, ಮಾಜಿ ಅಧ್ಯಕ್ಷ ವಿಠಲ ಗೌಡ ಕಾಪೆಜಾಲು, ಸದಸ್ಯರಾದ ರಾಕೇಶ್ ರೈ ಕೆಡೆಂಜಿ, ಯಶೋಧರ ಕೆಡೆಂಜಿಕಟ್ಟ, ಚಿದಾನಂದ ಕೆರೆನಾರು, ದಾಮೋದರ ನಾಕಿರಣ, ಬಾಲಚಂದ್ರ ನೂಜಿ, ಬಾಲಕೃಷ್ಣ ನೂಜಿ, ನ್ಯೂಸ್ ಪುತ್ತೂರು ಅಧ್ಯಕ್ಷ ಸೀತಾರಾಮ ಕೇವಳ, Prerana ಹಾಗೂ News puttur ಇದರ ನಿರ್ದೇಶಕ ನಾಗೇಶ್ ಕೆಡೆಂಜಿ, ಶಾಲಾ ಮಕ್ಕಳು ಮತ್ತು ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top