ಬೆಂಗಳೂರು: ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದ ಘಟನೆ ಬೆಂಗಳೂರು ದಕ್ಷಿಣದ ಸೂಲಿವಾರ ಗ್ರಾಮದಲ್ಲಿ ನಡೆದಿದೆ.
ಹಾಲಿನ ಡೈರಿ ಅಧ್ಯಕ್ಷ ಮರಿಬಸವಯ್ಯ ಎನ್ನುವವರಿಗೆ ಸೇರಿದ ಹಸುವಿನ ಕೆಚ್ಚಲು ಕೊಯ್ದಿದ್ದು, ಗಾಯಾಳು ಹಸು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಚಿದೆ.
ಗುರುಸಿದ್ದಪ್ಪ ಎನ್ನುವವರು ಹಳೇ ವೈಷಮ್ಯದ ಕಾರಣಕ್ಕೆ ಅವರ ಜಮೀನಿಗೆ ಮೇವು ತಿನ್ನಲು ಬಂದ ಹಸುವಿನ ಕೆಚ್ಚಲು ಕೊಯ್ದಿದ್ದಾರೆ ಎಂದು ಹಸುವಿನ ಮಾಲೀಕರು ಆರೋಪಿಸಿದ್ದಾರೆ. ಈ ಹಿಂದೆ ಡೈರಿಯ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಮರಿ ಬಸವಯ್ಯ ಮತ್ತು ಗುರು ಸಿದ್ದಪ್ಪ ನಡುವೆ ವೈಮನಸ್ಸು ಉಂಟಾಗಿತ್ತು. ಈ ದ್ವೇಷಕ್ಕೆ ತನ್ನ ಹಸುವಿನ ಕೆಚ್ಚಲು ಕೊಯ್ದಿದ್ದಾರೆ ಎಂದು ಮರಿ ಬಸವಯ್ಯ ಆರೋಪಿಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿದೆ.
























