ಪುತ್ತೂರು: ಹೆಂಡತಿಯನ್ನು ಕೊಚ್ಚಿ ಹತ್ಯೆಗೈದ ಗಂಡನೋರ್ವ ಪರಾರಿಯಾಗಿರುವ ಘಟನೆ ಆವರ್ಸೆ ಬಂಡ್ಸಾಲೆ ದರ್ಕಾಸು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಗಣೇಶ ಪೂಜಾರಿ (40) ಎಂಬಾತನೇ ಆರೋಪಿಯಾಗಿದ್ದು, ತನ್ನ ಪತ್ನಿ ರೇಖಾ ಪೂಜಾರಿ (30) ಅವರನ್ನು ಹತ್ಯೆ ಗೈದಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ಪತ್ನಿಗೆ ಎರಡು ಗಂಡು ಮಕ್ಕಳಿದ್ದು ಒಂದು ಮಗು ಒಂದನೇ ತರಗತಿಯಲ್ಲಿ ಹಾಗೂ ಇನ್ನೊಂದು ಅಂಗನವಾಡಿಯಲ್ಲಿ ಕಲಿಯುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
























