ಮಂಗಳೂರು : ಶರಾಬಿನ ಮತ್ತಿನಲ್ಲಿ ಅತಿವೇಗದ ಚಾಲನೆಯಿಂದ ಭೀಕರ ಅಪಘಾತ

ಡ್ರಿಂಕ್​ & ಡ್ರೈವ್ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಮಂಗಳೂರು: ಮಂಗಳೂರು ಹೊರವಲಯದ ಜಪ್ಪಿನಮೊಗರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ನಸುಕಿನ ಹೊತ್ತು ಸಂಭವಿಸಿದ ಭೀಕರ ಅಪಘಾತಕ್ಕೆ ಶರಾಬಿನ ಮತ್ತಿನಲ್ಲಿ ಕಾರನ್ನು ವಿಪರೀತ ವೇಗದಲ್ಲಿ ಚಲಾಯಿಸಿದ್ದೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಭೀಕರ ಅಪಘಾತದಲ್ಲಿ ಎನ್ಎಸ್​ಯುಐ ಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ ಹಾಗೂ ಅವರ ಸ್ನೇಹಿತ ಕದ್ರಿ‌ ನಿವಾಸಿ ಅಮನ್ ರಾವ್​ ಮೃತಪಟ್ಟಿದ್ದಾರೆ. ಕಾರಿನಲ್ಲಿ ಓರ್ವ ಇಟಲಿ ಪ್ರಜೆಯ ಸಹಿತ ಇತರ ಮೂವರಿದ್ದರು. ಇಬ್ಬರಿಗೆ ಗಾಯಗಳಾಗಿವೆ. ಇಟಲಿ ಪ್ರಜೆ ಸಣ್ಣ ಗಾಯದೊಂದಿಗೆ ಪಾರಾಗಿದ್ದಾರೆ.





















































 
 

ನಸುಕಿನ ವೇಳೆ ಸಂಭವಿಸಿದ ಭೀಕರ ಅಪಘಾತಕ್ಕೆ ಮದ್ಯಪಾನ ಮಾಡಿ ಅತಿವೇಗವಾಗಿ ಕಾರು ಚಾಲನೆ ಮಾಡಿರುವುದೇ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಅತಿಯಾದ ವೇಗ, ಡ್ರಿಂಕ್​ & ಡ್ರೈವ್ ಅಡಿ ಪ್ರಕರಣ ದಾಖಲಾಗಿದೆ.

ಮದ್ಯರಾತ್ರಿವರೆಗೂ ಎಣ್ಣೆ ಪಾರ್ಟಿ ಮಾಡಿದ್ದ ಐವರು ಯುವಕರು ಬಳಿಕ ಕಾರಿನಲ್ಲಿ ತಲಪಾಡಿಯಿಂದ ಮಂಗಳೂರಿನ ಕಡೆಗೆ ಹೊರಟ್ಟಿದ್ದರು. ಪೊಲೀಸರ ಪ್ರಕಾರ ಕಾರು ಗಂಟೆಗೆ 192 ಕಿಲೋಮೀಟರ್ ವೇಗದಲ್ಲಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಐವರು ಯುವಕರ ಪೈಕಿ ಓಂಶ್ರೀ ಪೂಜಾರಿ ಹಾಗೂ ಕದ್ರಿ‌ ನಿವಾಸಿ ಅಮನ್ ರಾವ್​ ಮೃತಪಟ್ಟಿದ್ದು, ವಂಶಿ ಮತ್ತು ಆಶಿಕ್​ಗೆ ಗಂಭೀರ ಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಟಲಿ ಮೂಲದ ಇನ್ನೊಬ್ಬ ಗೆಳೆಯ ಜೆರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಫೋಕ್ಸ್‌ವೇಗನ್ ಕಾರು ಸಂಪೂರ್ಣ ಜಖಂಗೊಂಡಿದೆ. ಇದು ಅಪಘಾತ ಸುರಕ್ಷೆಯಲ್ಲಿ ಐದು ತಾರಾಂಕಿತ ಕಾರು ಆಗಿದ್ದು, ಸಾಧಾರಣ ಅಪಘಾತದಲ್ಲಿ ಈ ಕಾರಿನಲ್ಲಿದ್ದರವು ಸಾಯುವುದಿಲ್ಲ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top