ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಮೇಲೆ ಇರಾನ್‌ ಖಂಡಾಂತರ ಕ್ಷಿಪಣಿ ದಾಳಿ

ಆಸ್ಪತ್ರೆ ಬಹುತೇಕ ಧ್ವಂಸ; ಅಪಾರ ಸಾವು-ನೋವು ಶಂಕೆ

ಟೆಲ್‌ ಅವಿವ್‌ : ಇರಾನ್‌ ಗುರುವಾರ ನಸುಕಿನ ಹೊತ್ತು ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಯೊಂದು ತೀವ್ರವಾಗಿ ಹಾನಿಗೊಂಡಿದೆ. 7ನೇ ದಿನವೂ ಉಭಯ ರಾಷ್ಟ್ರಗಳ ನಡುವಿನ ಪರಸ್ಪರ ಮಿಸೈಲ್‌ ದಾಳಿ ಮುಂದುವರಿದಿದೆ.

ಇರಾನಿನ ಅಣ್ವಸ್ತ್ರ ಘಟಕ ಪ್ರದೇಶದಲ್ಲಿರುವ ನೀರಿನ ಸೌಲಭ್ಯಗಳನ್ನು ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದ್ದು, ಇರಾನ್‌ ಇದಕ್ಕೆ ಪ್ರತಿಯಾಗಿ ಇಸ್ರೇಲಿನ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಈ ನಡುವೆ ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗಿದ್ದು, ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ.





















































 
 

7ನೇ ದಿನ ಇರಾನ್‌ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗೆ ದಕ್ಷಿಣ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆ ಬೀರ್‌ಶೆಬಾದಲ್ಲಿರುವ ಸೊರೊಕಾ ಬಹುತೇಕ ಧ್ವಂಸವಾಗಿದೆ. ಇದರಲ್ಲಿ ಸಾವುನೋವಿನ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ.

ಪ್ರತೀಕಾರದ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲ್‌, ಇರಾನ್‌ನ ಖೊಂಡಾಬ್ ಪರಮಾಣು ಘಟಕದ ಬಳಿಯಿರುವ ಭಾರಿ ನೀರಿನ ಸಂಪನ್ಮೂಲ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿದೆ. ನ್ಯೂಕ್ಲಿಯರ್‌ ಘಟಕವೇ ಇಸ್ರೇಲ್‌ನ ಮುಂದಿನ ಟಾರ್ಗೆಟ್‌ ಆಗಿದೆ ಎಂದು ಹೇಳಲಾಗಿದೆ. ಬುಧವಾರ ತಡರಾತ್ರಿ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್‌ ಯಾಸಿನ್ ಇಜ್ ಎ-ದಿನ್ ಎಂಬಾತನನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ. ಬ್ಯಾರಿಶ್‌ ಪಟ್ಟಣದಲ್ಲಿ ನಡೆದ ದಾಳಿಯಲ್ಲಿ ಹತ್ಯೆಗೈಯಲಾಗಿದೆ ಎಂದಿದೆ. ಯಾಸಿನ್‌ ಲಿಟಾನಿ ನದಿ ವಲಯದಲ್ಲಿರುವ ಹೆಜ್ಬೊಲ್ಲಾದ ರಾಕೆಟ್ ಫಿರಂಗಿ ಘಟಕದ ಕಮಾಂಡರ್ ಆಗಿದ್ದ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top